

ಹುಬ್ಬಳ್ಳಿ : ಇಲ್ಲಿನ ಕಮರಿಪೇಟೆಯ ಬಾಲಾಜಿ ಹಾಲ್ನಲ್ಲಿ ಹಾಗೂ ವಿದ್ಯಾನಗರದ ಕಾಳಿದಾಸ ನಗರ- ಲಿಂಗರಾಜ ನಗರ ರಸ್ತೆಯ ಶಿಮ್ಮರ ಆಂಡ್ ಶೈನ್ ಪಾರ್ಲರ್ನಲ್ಲಿ ಪ್ರತಿಷ್ಠಿತ ಗಾರ್ನಿಯರ್ ಕಂಪನಿಯಿಂದ ಹೇರ್ ಕಲರಿಂಗ್ ಅಭಿಯಾನ ನಡೆಯಿತು.
ಸಾರ್ವಜನಿಕರು, ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಉಚಿತ ಅಭಿಯಾನದ ಪ್ರಯೋಜನ ಪಡೆದುಕೊಂಡರು. ಕಂಪನಿಯ ಪರಿಣಿತರು ಮಹಿಳೆಯರಿಗೆ ಇಷ್ಟವಾದ ಬಣ್ಣದ ಡೈ ಹಚ್ಚಿದರು.
ಜೂ. 21ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹುಬ್ಬಳ್ಳಿ ಅಧ್ಯಾಪಕ ನಗರದ ಪಿರ್ಯಾಮಿಡ್ ಧ್ಯಾನ ಮಂದಿರದಲ್ಲಿ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ನಡೆಯಲಿದೆ. ಸಾರ್ವಜನಿಕರಿಗೆ ಹೇರ್ ಕಲರಿಂಗ್ ಉಚಿತವಾಗಿದ್ದು, ಕಡ್ಡಾಯವಾಗಿ ಮೋಬೈಲ್ ಫೋನ್ ತಂದು, ಒಟಿಪಿ ಆಧಾರಿತ ನೋಂದಣಿ ಮಾಡಿಸಿಕೊಂಡು ಈ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.