

ಸಾಲಿಗ್ರಾಮ : ನಿತ್ಯ ಹೊಸತನದ ಜತೆಗೆ ಹಲವು ಸಮಾಜಮುಖಿ ಚಟುವಟಿಕೆಯ ನೇತೃತ್ವ ವಹಿಸುವ ಮೂಲಕ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಗಮನ ಸೆಳೆಯುತ್ತಿದೆ ಎಂದು ಸಮಾಜ ಸೇವಕಿ ಸೀತಮ್ಮ ತಿಳಿಸಿದರು.
ಪಟ್ಟಣದಲ್ಲಿ ಎಸ್.ಕೆ. ಮಧುಚಂದ್ರ ಅವರ ಶ್ರೀಕೃಷ್ಣ ಭವನದಲ್ಲಿ ಮೂರು ದಿನಗಳ ಕಾಲ ವಿಜಯವಾಣಿ ಸಹಯೋಗದಲ್ಲಿ ಆಯೋಜಿಸಿದ್ದ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನದ ಅಂತಿಮ ದಿನವಾದ ಮಂಗಳವಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮತ್ತು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ದಿನಪತ್ರಿಕೆಯಾಗಿರುವ ವಿಜಯವಾಣಿಯಲ್ಲಿ ವಿಶೇಷ ಹಾಗೂ ವಿಭಿನ್ನವೆನಿಸುವ ಸುದ್ದಿ, ಲೇಖನಗಳು ಪ್ರಕಟಗೊಳ್ಳುತ್ತಿದ್ದು, ಓದುಗರ ಅಚ್ಚುಮೆಚ್ಚಿನ ಪತ್ರಿಕೆಯಾಗಿದೆ. ಇದರೊಂದಿಗೆ ವಿಜಯವಾಣಿ ಪತ್ರಿಕೆಯ ಮಾಧ್ಯಮ ಸಹಯೋಗದಲ್ಲಿ ಆಯೋಜಿಸಿರುವ ಉಚಿತ ಹೇರ್ ಕಲರಿಂಗ್ ಕಾರ್ಯಕ್ರಮ ಸಾಲಿಗ್ರಾಮದಲ್ಲಿ ಮೂರು ದಿನಗಳು ನಡೆದು ಯಶಸ್ವಿಯಾಗಿದೆ ಎಂದರು.
ಇಂತಹ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಇನ್ನೆರಡು ದಿನಗಳ ಮಾಡಿ ಎಂದು ಜನರಿಂದ ಒತ್ತಡ ಬಂದಿತು. ಹೇರ್ ಕಲರಿಂಗ್ ಮಾಡಿಸಿಕೊಳ್ಳಲು ಜನರು ಸಾಲುಗಟ್ಟಿ ನಿಂತು ಕಾರ್ಯಕ್ರಮದ ಅನುಕೂಲ ಪಡೆದುಕೊಂಡರು ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಹರದನಹಳ್ಳಿ ನಂದಿನಿ ರಮೇಶ್ ಮಾತನಾಡಿ, ವಿಜಯವಾಣಿ ಸಹಯೋಗದಲ್ಲಿ ಆಯೋಜಿಸಿದ್ದ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನದಿಂದಾಗಿ ಗ್ರಾಮೀಣ ಭಾಗದ ಜನರಿಗೂ ಅನುಕೂಲವಾಯಿತು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಕೆ.ಮಧುಚಂದ್ರ, ಕಾಂಗ್ರೆಸ್ ನಗರ ಅಧ್ಯಕ್ಷ. ಪ್ರಭಾಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಟರಾಜ್, ಜೆಡಿಎಸ್ ಮುಖಂಡ ಹರದನಹಳ್ಳಿ ರಮೇಶ್, ಡಿ.ಕೆ.ಶಿವಕುಮಾರ್ ಬಳಗದ ತಾಲೂಕು ಅಧ್ಯಕ್ಷ ಮಂಡೂರ್ ಸಂತೋಷ್, ಗ್ರಾಪಂ ಸದಸ್ಯ ರಾಂಪುರ ಲೋಕೇಶ್, ಕಾಂಗ್ರೆಸ್ ತಾಲೂಕು ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್, ನಾಯಕ ಸಮಾಜದ ಮುಖಂಡ ಮಹದೇವನಾಯಕ, ಸ್ಟುಡಿಯೋ ಪ್ರಕಾಶ್, ವೆಂಕಟೇಶ್, ಬಾಬಣ್ಣ, ಬಾಚಳ್ಳಿ ಹರೀಶ್, ಹರದನಹಳ್ಳಿ ಮಂಜು ಮತ್ತಿತರರಿದ್ದರು.