

ಧಾರವಾಡ: ನಗರದ ಸತ್ತೂರಿನ ಬಸವೇಶ್ವರ ಸರ್ಕಲ್‌ನಲ್ಲಿ ಗಾರ್ನಿಯರ್ ಉಚಿತ ಹೇರ್ ಕಲರಿಂಗ್ ಅಭಿಯಾನ ಗುರುವಾರ ನಡೆಯಿತು. ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಷ್ಠಿತ ಗಾರ್ನಿಯರ್ ಕಂಪನಿಯ ಪರಿಣಿತರಿಂದ ಮಹಿಳೆಯರಿಗೆ ಇಷ್ಟವಾದ ಡೈ ಹಚ್ಚಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಮೇ 24ರಂದು ಸತ್ತೂರಿನ ಬಸವೇಶ್ವರ ಸರ್ಕಲ್‌ನಲ್ಲಿ ಗಾರ್ನಿಯರ್ ಉಚಿತ ಹೇರ್ ಕಲರಿಂಗ್ ಅಭಿಯಾನ ಮುಂದುವರಿಯಲಿದೆ. ಆಸಕ್ತರು ಒಟಿಪಿ ಆಧಾರಿತ ನೋಂದಣಿಗೆ ಕಡ್ಡಾಯವಾಗಿ ಮೊಬೈಲ್ ತಂದು ಅಭಿಯಾನದ ಪ್ರಯೋಜನ ಪಡೆಯಬೇಕು ಎಂದು ಆಯೋಜಕರು ತಿಳಿಸಿದ್ದಾರೆ.