ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ

Garniyar New 7896544
Published on

ಹುಬ್ಬಳ್ಳಿ : ಇಲ್ಲಿನ ಕಲ್ಯಾಣ ನಗರದ ರಂಗಮಂದಿರದಲ್ಲಿ ಶುಕ್ರವಾರದಂದು ಪ್ರತಿಷ್ಠಿತ ಗಾರ್ನಿಯರ್ ಕಂಪನಿಯಿಂದ ಹೇರ್ ಕಲರಿಂಗ್ ಅಭಿಯಾನ ನಡೆಯಿತು.

ಸಾರ್ವಜನಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,ಉಚಿತ ಅಭಿಯಾನದ ಪ್ರಯೋಜನ ಪಡೆದುಕೊಂಡರು. ವಿಶೇಷವಾಗಿ ಮಹಿಳೆಯರು ಹೇರ್ ಕಲರಿಂಗ್ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಂಪನಿಯ ಪರಿಣಿತರು ಮಹಿಳೆಯರಿಗೆ ಇಷ್ಟವಾದ ಬಣ್ಣದ ಡೈ ಮಾಡಿದರು.

ಜೂನ್ 1ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹುಬ್ಬಳ್ಳಿ ದೇಶಪಾಂಡೆ ನಗರದ ಕುಂಬಕೋಣಂ ಉದ್ಯಾನದ ಗಣಪತಿ ದೇವಸ್ಥಾನದ ಎದುರಿಗೆ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ನಡೆಯಲಿದೆ. ಸಾರ್ವಜನಿಕರಿಗೆ ಹೇರ್ ಕಲರಿಂಗ್ ಉಚಿತವಾಗಿದ್ದು, ಕಡ್ಡಾಯವಾಗಿ ಮೋಬೈಲ್ ಫೋನ್ ತಂದು ಒಟಿಪಿ ಆಧಾರಿತ ನೋಂದಣಿ ಮಾಡಿಕೊಂಡು ಅಭಿಯಾನದ ಪ್ರಯೋಜನ ಪಡೆಯಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ಕಾರಣ ಸುತ್ತ ಮುತ್ತಲಿನ ಆಸಕ್ತರು ಸದುಪಯೋಗಪಡಿಸಿಕೊಳ್ಳಲು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net