

ಯಳಂದೂರು: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ಗಾರ್ನಿಯರ್ ಸಹಯೋಗದಲ್ಲಿ ಪಟ್ಟಣದಲ್ಲಿ ಮೇ 19, 20 ಮತ್ತು 21ರಂದು ಉಚಿತ ಹೇರ್ ಕಲರಿಂಗ್ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ದೇವಾಂಗ ಬೀದಿಯಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಮೂರು ದಿನಗಳ ಅಭಿಯಾನಕ್ಕೆ ಮೇ 19ರ ಬೆಳಗ್ಗೆ 10 ಗಂಟೆಗೆ ಚಾಲನೆ ದೊರೆಯಲಿದೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪುರಷರು, ಯುವಕ, ಯವತಿಯರು ತಮ್ಮ ಇಚ್ಛೆಯ ಕಲರ್‌ಗಳನ್ನು ತಲೆಗೂದಲಿಗೆ ಉಚಿತವಾಗಿ ಹಚ್ಚಿಕೊಡಲಾಗುತ್ತದೆ. ಬಿಳಿ ಕೂದಲು ಇರುವವರಿಗೂ ಆದ್ಯತೆ ಇದೆ.
ಈ ಅಭಿಯಾನವು ಈಗಾಗಲೇ ಕೊಳ್ಳೇಗಾಲ, ಹನೂರು ಪಟ್ಟಣಗಳಲ್ಲಿ ಯಶಸ್ವಿಯಾಗಿ ನಡೆದಿದ್ದು, ನೂರಾರು ಮಹಿಳೆಯರು ಮತ್ತು ಪುರಷರುತಲೆಯ ಕೂದಲಿಗೆ ನುರಿತ ಬ್ಯೂಟಿಷಿಯನ್‌ಗಳಿಂದ ತಮ್ಮ ಇಚ್ಚೆಯ ಬಣ್ಣ ಹಚ್ಚಿಸಿಕೊಂಡಿದ್ದಾರೆ. ಯಳಂದೂರಿನಲ್ಲಿ ಮೇ 19ರಿಂದ ಮೂರು ದಿನಗಳ ಕಾಲ ನಡೆಯುವ ಉಚಿತ ಹೇರ್ ಕಲರಿಂಗ್‌ನಲ್ಲಿ ಆಸಕ್ತರು ಭಾಗವಹಿಸಬಹುದಾಗಿದೆ. ಸಂಪರ್ಕ ಸಂಖ್ಯೆ: 9611459553