ಸೊರಬ, ಆನವಟ್ಟಿಯಲ್ಲಿ ಗಾರ್ಮೆಂಟ್ಸ್

19sor1
ಸೊರಬದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಸಂಕಲ್ಪ ಭಾರತ ಯಾತ್ರೆ ಕಾರ್ಯಕ್ರಮದಲ್ಲಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಭಾರತಿ ಶೆಟ್ಟಿ, ಎಂ.ಡಿ.ಉಮೇಶ್, ವೀರೇಶ್ ಮೇಸ್ತ್ರಿ ಇತರರಿದ್ದರು.
Published on

ಸೊರಬ: ದೇಶದಲ್ಲಿ ನಗರಗಳ ಜತೆಗೆ ಗ್ರಾಮಗಳು ಉದ್ಧಾರವಾಗಬೇಕು ಎಂಬ ಉದ್ದೇಶದಿಂದ ವಿಕಸಿತ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ವಿಕಸಿತ ಸಂಕಲ್ಪ ಭಾರತ ಯಾತ್ರೆ ಅಡಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಸಮರ್ಪಕವಾಗಿ ಕರೊನಾ ಎದುರಿಸಿದೆ. ರೈತರ ಹಿತ ಕಾದಿದೆ. ಆರ್ಥಿಕ ಪ್ರಗತಿ ಸಾಧಿಸಲು ಮೋದಿ ಅವರಿ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳು ಕಾರಣವಾಗಿವೆ ಎಂದರು.
ಸೊರಬದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಮನೆಗಳಿಗೆ ನೀರು ಕೊಡುವ ಕಾರ್ಯಕ್ರಮ, ಜನಧನ ಯೋಜನೆ ಮೂಲಕ ಮಹಿಳೆಯ ಖಾತೆಗೆ ಹಣ ಬರುವಂತೆ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಯಾಗಿದೆ. ಸೊರಬ, ಆನವಟ್ಟಿಯಲ್ಲಿ ವಿವಿಧ ಉದ್ಯಮಿಗಳ ಸಹಕಾರದಿಂದ ಗಾರ್ಮೆಂಟ್ಸ್ ಆರಂಭಿಸಲಾಗುವುದು. ತಾಳಗುಪ್ಪ-ಶಿರಸಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಸರ್ವೇ ಮಾಡಲಾಗಿದೆ. ಭದ್ರಾವತಿ ಆಕಾಶವಾಣಿ ಕೇಂದ್ರವನ್ನು ಉನ್ನತೀಕರಣಗೊಳಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಹೀಗೆ ಕೇಂದ್ರ ಸರ್ಕಾರ ಹತ್ತು ವರ್ಷಗಳಲ್ಲಿ ಮಹತ್ವಪೂರ್ಣ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶವು ಪ್ರಪಂಚದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಪುರಸಭೆ ಸದಸ್ಯರಾದ ಎಂ.ಡಿ.ಉಮೇಶ್, ವೀರೇಶ್ ಮೇಸ್ತ್ರಿ, ಮಧುರಾಯ್ ಜಿ.ಶೇಟ್, ನಟರಾಜ್, ಜಯಲಕ್ಷ್ಮೀ, ಜಿಪಂ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್, ಪ್ರಮುಖರಾದ ಡಾ. ಎಚ್.ಇ.ಜ್ಞಾನೇಶ್, ರಾಜು ಎಂ ತಲ್ಲೂರು, ಶಿವಕುಮಾರ ಕಡಸೂರು, ಗುರುಪ್ರಸನ್ನ ಗೌಡ ಬಾಸೂರು, ವಿಜಯೇಂದ್ರ, ಜಾನಕಪ್ಪ, ವಕೀಲ ನಾಗಪ್ಪ, ನೋಡಲ್ ಅಧಿಕಾರಿ ಅಮರನಾಥ್, ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಹರೀಶ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net