

ತುಮಕೂರು: ಗಾರ್ಮೆಂಟ್ಸ್ ಸಂಸ್ಥೆಯ ನೌಕರರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಪಲ್ಟಿಯಾಗಿ ಒಬ್ಬ ಸಿಬ್ಬಂದಿ ಸಾವಿಗೀಡಾಗಿದ್ದು, ಹತ್ತು ಮಂದಿಗೆ ಗಾಯಗಳಾಗಿವೆ. ತುಮಕೂರು ತಾಲೂಕಿನ ಹೊದೆಕಲ್ ಬಳಿ ಈ ಅಪಘಾತ ಸಂಭವಿಸಿದೆ.
ಗಾರ್ಮೆಂಟ್ಸ್ ಸಿಬ್ಬಂದಿಯನ್ನು ಕರೆದೊಯ್ಯುವ ಈ ಬಸ್ನಲ್ಲಿದ್ದ ಕೆಂಪಣ್ಣ (46) ಎಂಬ ವ್ಯಕ್ತಿ ಸಾವಿಗೀಡಾಗಿದ್ದು, ಬಸ್ನಲ್ಲಿದ್ದ ಇನ್ನೂ ಹತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತಕ್ಕೆ ಕಾರಣವೇನು, ಬಸ್ನಲ್ಲಿ ಎಷ್ಟು ಮಂದಿ ಇದ್ದರು, ಗಾಯಾಳುಗಳ ಪರಿಸ್ಥಿತಿ ಹೇಗಿದೆ ಎಂಬಿತ್ಯಾದಿ ಕುರಿತ ಖಚಿತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಕ್ಯಾತ್ಸಂದ್ರ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.