

ಹುಬ್ಬಳ್ಳಿ: ವೀರರಾಣಿ ಕಿತ್ತೂರು ಚನ್ನಮ್ಮ ಜಯಂತಿ ನಿಮಿತ್ತ ಹುಬ್ಬಳ್ಳಿಯಲ್ಲಿನ ಚನ್ನಮ್ಮ ಪುತ್ಥಳಿಗೆ ಬುಧವಾರ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು. ಪ್ರಮುಖರಾದ ರಮೇಶ ಮಹಾದೇವಪ್ಪನವರ, ಸಂತೋಷ ವೆರ್ಣೇಕರ, ಜಿ.ಜಿ. ದ್ಯಾವನಗೌಡ್ರ, ಡಾ.ಎಚ್.ವಿ. ಬೆಳಗಲಿ, ರಾಜಶೇಖರ ಕರ್ಕಂಣ್ಣವರ, ನಾಗರಾಜ ಗಂಜಿಗಟ್ಟಿ, ಲಕ್ಷ್ಮೀ ದೊಡ್ಡಮನಿ, ವಿಶ್ವನಾಥ ಹಿರೇಗೌಡ್ರ, ಸ್ವರ್ಣಲತಾ ಗದಿಗೆಪ್ಪಗೌಡ್ರ, ಪ್ರಸನ್ನ ಕುಲಕರ್ಣಿ ಇತರರು ಉಪಸ್ಥಿತರಿದ್ದರು.