ಶಬರಿಮಲೈ ಯಾತ್ರೆಗೆ ತೆರಳಿದ ಮಾಲಾಧಾರಿಗಳು

bhr ayyappa
ಬಾಳೆಹೊನ್ನೂರಿನ ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ 31 ಮಾಲಾಧಾರಿಗಳು ಇರುಮುಡಿ ಕಟ್ಟಿ ಶಬರಿಮಲೈ ಯಾತ್ರೆ ಕೈಗೊಂಡರು. ಎಕೆಪಿ ಕೃಷ್ಣ ಪೊದುವಾಳ್, ಆರ್.ಡಿ.ಮಹೇಂದ್ರ, ಜಗದೀಶ್ಚಂದ್ರ, ರವಿ, ರಮೇಶ್, ಚೇತನ್ ಇತರರಿದ್ದರು.
Published on

ಬಾಳೆಹೊನ್ನೂರು: ರೇಣುಕನಗರದ ಪ್ರಸನ್ನ ಗಣಪತಿ ದೇವಸ್ಥಾನದ ಆವರಣದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಆಯೋಜಿಸಿದ್ದ 31ನೇ ವರ್ಷದ ಅಯ್ಯಪ್ಪ ಉತ್ಸವದ ಮಾಲಾಧಾರಿಗಳು ಇರುಮುಡಿ ಕಟ್ಟಿ ಶಬರಿಮಲೈ ಯಾತ್ರೆಗೆ ತೆರಳಿದರು.

ಯಾತ್ರೆ ಅಂಗವಾಗಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಭಸ್ಮಾಭಿಷೇಕ, ಪುಷ್ಪಾಲಂಕಾರ ನೆರವೇರಿಸಿ ಮಹಾಮಂಗಳಾರತಿ ಮಾಡಲಾಯಿತು. ಪೂಜೆ ನಂತರ 31 ಮಾಲಾಧಾರಿ ಸ್ವಾಮಿಗಳಿಗೆ ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್ ಇರುಮುಡಿ ಕಟ್ಟಿ ಶಬರಿಮಲೈ ಯಾತ್ರೆಗೆ ಕಳುಹಿಸಿದರು. ಸೇವಾ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ, ಪ್ರಮುಖರಾದ ಬಿ.ಜಗದೀಶ್ಚಂದ್ರ, ರವಿ, ಕೋಟಿ ರಮೇಶ್, ಚೇತನ್ ಆಚಾರ್ಯ, ಮುರುಗೇಶ್, ಸುಂದರೇಶ್ ಮುದುಗುಣಿ, ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net