ಗಾರಿಗೆ ಜಾತ್ರೆ ನಿಮಿತ್ತ ವಿವಿಧ ಕಾರ್ಯಕ್ರಮ ನಾಳೆಯಿಂದ

Manvi Kalmutt Swami
ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು
Published on

ಮಾನ್ವಿ: ಕಲ್ಮಠದ ಧ್ಯಾನ ಮಂದಿರದ ಆವರಣದಲ್ಲಿ ಫೆ.21ರಿಂದ 26 ರವರೆಗೆ ಗಾರಿಗೆ ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದ್ದಾರೆ.

ಮೊದಲ ದಿನ ಫೆ.21 ರಂದು ಬೆಳಗ್ಗೆ 8:30ಕ್ಕೆ ನೀಲಗಲ್ ಸಂಸ್ಥಾನ ಬೃಹನ್ಮಠ ಪಂಚಾಕ್ಷರಿ ಶಿವಾಚಾರ್ಯರು ಧರ್ಮಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಸಂಜೆ 6:30ಕ್ಕೆ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದಾರೆ.

ಬಿಚ್ಚಾಲಿ ಸಂಸ್ಥಾನ ಮಠದ ವೀರತಪಸ್ವಿ ವೀರಭದ್ರ ಶಿವಾಚಾರ್ಯರು, ತೆಕ್ಕಲಕೋಟೆ ಕಂಬಾಳಿ ಮಠದ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ, ರಾಜಾ ವೆಂಕಟಪ್ಪನಾಯಕ, ಗಂಗಾಧರನಾಯಕ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಫೆ.23ರಂದು ಮಹಿಳಾ ದೇಸಿ ಕ್ರೀಡೆಗಳಿಗೆ ಪುರಸಭೆ ಅಧ್ಯಕ್ಷೆ ಲಕ್ಷ್ಮೀ ವೀರೇಶ, ಡಾ.ಅಂಬಿಕಾ ಚಾಲನೆ ನೀಡಲಿದ್ದಾರೆ. ಫೆ.24 ರಂದು ಜೋಡೆತ್ತುಗಳಿಂದ 1.5 ಟನ್ ತೂಕದ ಕಲ್ಲು ಎಳೆಯುವ ಸ್ಪರ್ಧೆಗೆ ಉದ್ಯಮಿ ವೀರಭದ್ರಪ್ಪಗೌಡ ಆಲ್ದಾಳ ಚಾಲನೆ ನೀಡಲಿದ್ದಾರೆ.

ಫೆ. 25 ರಂದು ಶಿಕ್ಷಣ ಸಮಾವೇಶ, ಫೆ.26ರಂದು ಸಾಮೂಹಿಕ ವಿವಾಹ, ಸಂಜೆ ಗಾರಿಗೆ ಜಾತ್ರೋತ್ಸವ ನಡೆಯಲಿದೆ. ರಥೋತ್ಸವಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಚಾಲನೆ ನೀಡಲಿದ್ದಾರೆ. ನಂತರ ರಾಜ್ಯಮಟ್ಟದ ವಿರೂಪಾಕ್ಷೇಶ್ವರ ಕೃಪಾ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಕಲ್ಮಠ ಶ್ರೀಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net