ತೋಟದ ರಸ್ತೆ ಸುಧಾರಣೆಗೆ ಕ್ರಮ

7Rayabag3
Published on

ರಾಯಬಾಗ: ಮತಕ್ಷೇತ್ರದ ಮುಖ್ಯರಸ್ತೆ ಮತ್ತು ತೋಟದ ರಸ್ತೆಗಳನ್ನು ಸುಧಾರಿಸುವುದರ ಮೂಲಕ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ನಂದಿಕುರಳಿ ಗ್ರಾಮದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಒಂದು ಕೋಟಿ ರೂ. ಅನುದಾನದಲ್ಲಿ 6 ಕಿಮೀ ನಸಲಾಪುರ-ನಂದಿಕುರಳಿ ರಸ್ತೆ ಸುಧಾರಣೆ ಹಾಗೂ ಜಿಪಂ ಇಲಾಖೆಯಿಂದ ಎಸ್‌ಸಿ, ಎಸ್.ಟಿ ಯೋಜನೆಯಡಿ ಮಂಜೂರಾದ 5 ಲಕ್ಷ ರೂ. ನಿಂದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಲೋಕೋಪಯೋಗಿ ಇಲಾಖೆ ಎಇಇ ಆರ್.ಬಿ.ಮನವಡ್ಡರ, ಎಇ ಆರ್.ಪಿ.ಅವತಾಡೆ, ಜಿಪಂ ಎಇಇ ರಾಜೇಶ ಡಂಗ, ಗ್ರಾಪಂ ಉಪಾಧ್ಯಕ್ಷ ಅಮಿತ್ ಜಾಧವ, ಪಥ್ವಿರಾಜ ಜಾಧವ, ಪ್ರಧಾನಿ ಉಪ್ಪಾರ, ದಸ್ತಗಿರ ಮುಲ್ತಾನಿ, ಮಾರುತಿ ಬಾನಕರಿ, ತಾನಾಜಿ ಜಾಧವ, ಮಾರುತಿ ಬಾಪಕರ, ನಾರಾಯಣ ಸಾವಂತ, ರಾಯಪ್ಪ ಗುಂಡಕಲ್ಲೆ, ಮಂಜು ಸಂಗೋಟೆ, ರಾಮು ಬಾನಕಾರಿ, ಮಹೇಶ ಸಾವಂತ, ರಾಜೀವ ಸಾವಂತ, ಹರ್ಷಾ ಮಾಳಿ, ಮಲ್ಲಪ್ಪ ಕಾಂಬಳೆ, ಅಣ್ಣಪ್ಪ ಸಂಗಟೆ, ಸುರೇಶ ಉಮರಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net