ಬೇಸಿಗೆಯಲ್ಲಿ ಹಾಳಾಗುತ್ತಿರುವ ಉದ್ಯಾನ, ಗಿಡಗಳು, ಸದಸ್ಯರಿಂದಲೇ ನಗರಸಭೆ ವಿರುದ್ಧ ಆಕ್ರೋಶ

20cbp5.jpg
Published on

ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ಜಿಲ್ಲಾ ಕೇಂದ್ರದಲ್ಲಿನ ಉದ್ಯಾನಗಳು, ಹೆದ್ದಾರಿ ಬದಿಯ ಗಿಡಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ನಗರಸಭೆ ವಿಲವಾಗುತ್ತಿದೆ ಎಂದು ನಗರಸಭಾ ಮಾಜಿ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆಯ ನಡುವಿನ ಗಿಡಗಳಿಗೆ ನೀರಿನ ವ್ಯವಸ್ಥೆ ಒದಗಿಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಜೋಡಿ ರಸ್ತೆ, ಕಚೇರಿ ಕಟ್ಟಡಗಳು, ರಸ್ತೆಗಳ ಬದಿ ಸೇರಿದಂತೆ ವಿವಿಧೆಡೆ 1200 ಗಿಡಗಳನ್ನು ಸಸಿ ನೆಡಲಾಗಿತ್ತು. ಹಾಗೆಯೇ ಬೇಸಿಗೆಯಲ್ಲಿ ಒಣಗಿ ಹೋಗುತ್ತಿದ್ದ ಗಿಡಗಳಿಗೆ ನೀರುಣಿಸಿ, ಉಳಿಸಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ನಗರಸಭೆ ಸಂಪೂರ್ಣ ರ್ನಿಲಕ್ಷ$್ಯ ಧೋರಣೆ ತೋರಿದೆ ಎಂದು ಕಿಡಿಕಾರಿದ್ದಾರೆ.
ನಗರಸಭೆ ನಿರ್ವಹಣೆಯ ಹಲವು ಗಿಡಗಳು ನಾಶವಾಗುತ್ತಿವೆ. ಇದಕ್ಕೆ ಅಧ್ಯಕ್ಷ ಮತ್ತು ಪೌರಾಯುಕ್ತರಿಗೆ ಬೇಸಿಗೆಯ ಸಂದರ್ಭದಲ್ಲಾದರೂ ತಾತ್ಕಾಲಿಕ ನೀರಿನ ವ್ಯವಸ್ಥೆಯನ್ನು ಒದಗಿಸಲು ನಿರಂತರವಾಗಿ ಗಮನ ಸೆಳೆಯಲಾಗಿದೆ. ಆದರೂ ಕಿವಿಗೊಡುತ್ತಿಲ್ಲ. ಟ್ಯಾಂಕರ್ ನೀರಿನ ವ್ಯವಸ್ಥೆ ಕೈಗೊಳ್ಳಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಬೇಸರಿಸಿದ್ದಾರೆ.
ಸ್ವಯಂ ಉದ್ಯಾನಗಳನ್ನು ಸಮರ್ಪಕವಾಗಿ ನಿರ್ವಹಿಸಲು ನಗರಸಭೆಗೆ ಸಾಧ್ಯವಾಗುತ್ತಿಲ್ಲ. ಇದು ಸುತ್ತಲಿನ ಪ್ರದೇಶದಲ್ಲಿ ಉತ್ತಮ ಸ್ವಚ್ಛತೆ ನಿರ್ವಹಣೆ, ಗಿಡಗಳನ್ನು ಬೆಳೆಸುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂದೇಶವನ್ನು ಸಾರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಸುಬ್ರಮಣ್ಯಚಾರಿ, ಬಿ.ಪಿ.ಯತೀಶ್, ಸತೀಶ್, ಮುಖಂಡರಾದ ಮುನಿರಾಜು, ವಿಜಯ್ ಕುಮಾರ್ ಮತ್ತಿತರರು ಇದ್ದರು.

ಚಿಕ್ಕಬಳ್ಳಾಪುರ ನಗರಸಭಾ ವ್ಯಾಪ್ತಿಯಲ್ಲಿ ಬೇಸಿಗೆಗೆ ಉದ್ಯಾನಗಳು, ಗಿಡಗಳು ನಿರ್ವಹಣೆಯಿಲ್ಲದೇ ಒಣಗಿ ಹಾಳಾಗುತ್ತಿದ್ದು ಈ ಅವಧಿಯಲ್ಲಾದರೂ ಪರಿಹಾರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net