ಉದ್ಯಾನ ಅಭಿವೃದ್ಧಿಗಾಗಿ ಅಧಿಕಾರಿಗೆ ಸಸಿ

28-DVD-3
ದೇವದುರ್ಗದಲ್ಲಿ ಪುರಸಭೆ ಆಡಳಿತಾಧಿಕಾರಿ ಗಂಗಾಧರ್‌ಗೆ ನಾಗರಿಕರ ವೇದಿಕೆ ಸಸಿ ನೀಡಿ ಮನವಿ ಸಲ್ಲಿಸಿತು. ಪ್ರಮುಖರಾದ ಹನುಮಂತಪ್ಪ ಮನ್ನಾಪುರ, ನರಸಣ್ಣಗೌಡ ನಾಯಕ, ರಂಗಪ್ಪ ಬಲಿದವ್ ಕೋತಿಗುಡ್ಡ, ರಾಘವೇಂದ್ರ ನಾಯಕ ಅಂಜಳ ಇತರರಿದ್ದರು.
Published on

ದೇವದುರ್ಗ: ಪಟ್ಟಣದಲ್ಲಿ ಉದ್ಯಾನ ಅಭಿವೃದ್ಧಿ ಮಾಡಲು ಒತ್ತಾಯಿಸಿ ಪುರಸಭೆ ಆಡಳಿತಾಧಿಕಾರಿ ಗಂಗಾಧರ್‌ಗೆ ನಾಗರಿಕರ ವೇದಿಕೆ ಸಸಿಗಳನ್ನು ನೀಡುವ ಮೂಲಕ ಸೋಮವಾರ ವಿಭಿನ್ನವಾಗಿ ಮನವಿ ಸಲ್ಲಿಸಿತು.

ಪುರಸಭೆ ಆಡಳಿತ ಅಸ್ತಿತ್ವಕ್ಕೆ ಬಂದು ಏಳು ದಶಕ ಕಳೆದರೂ ಸುಸಜ್ಜಿತ ಉದ್ಯಾನ ನಿರ್ಮಾಣ ಮಾಡಿಲ್ಲ. ಇದರಿಂದ ಜನರಿಗೆ ವಿಶ್ರಾಂತಿ ಪಡೆಯಲು ಸಮಸ್ಯೆಯಾಗುತ್ತಿದೆ. ಯಾವುದೇ ಸರ್ಕಾರಿ ಜಾಗದಲ್ಲೂ ಉದ್ಯಾನ ಅಭಿವೃದ್ಧಿ ಮಾಡಿಲ್ಲ.

ಪುರಸಭೆ ವ್ಯಾಪ್ತಿಯಲ್ಲಿ 50ಕ್ಕಿಂತ ಹೆಚ್ಚು ಲೇಔಟ್‌ಗಳಿವೆ. ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಆದರೆ, ನಾಗರಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ಉದ್ಯಾನ ನಿರ್ಮಾಣ ಮಾಡಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಉದ್ಯಾನ ಅಭಿವೃದ್ಧಿ ಮಾಡಿ ಸೌಲಭ್ಯ ಒದಗಿಸಬೇಕು. ಹೊಸ ಬಡಾವಣೆ, ಲೇಔಟ್‌ನಲ್ಲಿ ಉದ್ಯಾನ ಕಡ್ಡಾಯವಾಗಿ ನಿರ್ಮಿಸಿ ಸಸಿಗಳನ್ನು ನೆಡಬೇಕು. ಸರ್ಕಾರಿ ಜಾಗ, ರಸ್ತೆಅಕ್ಕಪಕ್ಕ ಸಸಿನೆಟ್ಟು ಹಸಿರೀಕರಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪುರಸಭೆ ಕಂದಾಯ ನಿರೀಕ್ಷಕ ಪ್ರಕಾಶ, ಪುರಸಭೆ ನೌಕರ ರಂಗಪ್ಪ, ನಾಗರಿಕರಾದ ಹನುಮಂತಪ್ಪ ಮನ್ನಾಪುರ, ನರಸಣ್ಣಗೌಡ ನಾಯಕ, ರಂಗಪ್ಪ ಬಲಿದವ್ ಕೋತಿಗುಡ್ಡ, ರಾಘವೇಂದ್ರ ನಾಯಕ ಅಂಜಳ, ಹೊನ್ನಯ್ಯ ಗುಂಡಗುರ್ತಿ, ಆಕಾಶ್, ಎಚ್.ಶಿವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net