

ಹುಬ್ಬಳ್ಳಿ: ಸ್ವಾತಂತ್ರೃ ದಿನಾಚರಣೆ ನಿಮಿತ್ತ ಸ್ವಚ್ಛತಾ ಆಂದೋಲನಾ ಪರಿವಾರದ ಸದಸ್ಯರು, ‘ನಮ್ಮ ನಡಿಗೆ ಸ್ವಚ್ಛತೆ ಕಡೆಗೆ’ ಎನ್ನುವ ಘೋಷಣೆ ಅಡಿ ಹುಬ್ಬಳ್ಳಿಯ ಬಾದಾಮಿ ನಗರದ ಉದ್ಯಾನದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ಕೈಗೊಂಡರು. ಪಾಲಿಕೆ ಸದಸ್ಯೆ ಉಮಾ ಮುಕುಂದ, ಪ್ರಮುಖರಾದ ವಿ. ಮುಕುಂದ, ರಘುರಾಮ ಇಬ್ರಾಹಿಂಪುರ, ನಿಖಿಲ್ ವಂಗಿ, ಪ್ರೀತಂ ಇರಕಲ್, ವೈ.ಬಿ. ಪಾಟೀಲ, ಮನೋಜ ಹಬ್ಬು, ಪ್ರಕಾಶ ಆನೆಗುಂದಿ, ಎಸ್. ರತ್ನಾಕರ, ಅಶ್ವಿನಿ ಕಟ್ಟಿಮನಿ, ಸುಧಾ ಅನೆಗುಂದಿ, ಶ್ವೇತಾ ಗುಮಟಿಮಠ, ಮೇಘಾ ಚಾಗಾಪುರ, ವಿನುತಾ ಬಾಗೇವಾಡಿ, ಕವಿತಾ ಮೊರಬ, ಇತರರು ಇದ್ದರು.