

ಧಾರವಾಡ: ಶೈಲಿ ಹಾಗೂ ತಂತ್ರಗಳೇ ಸಣ್ಣ ಕಥೆಗಳ ಜೀವಾಳ. ತಂತ್ರಗಳನ್ನು ಬಳಸಿಕೊಂಡು ಗ್ರಹಿಕೆಯ ನೆಲೆಗಳನ್ನು ವಿಸ್ತರಿಸಿಕೊಳ್ಳಬೇಕು. ನಿರಂತರ ಪ್ರಯತ್ನ ಹಾಗೂ ಪರಿಷ್ಕರಣೆ ಅತ್ಯವಶ್ಯ ಎಂದು ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಷ್ಪಾ ಹಾಲಭಾವಿ ಅವರ `ಗರ್ಭಗುಡಿ ಬಾಡಿಗೆಗೆ' ಕಥಾಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಆಗಿರುವುದನ್ನು ಬರೆಯುವುದಕ್ಕಿಂತ ಆಗಬಹುದಾದದ್ದನ್ನು ಬರೆಯಬೇಕು. ಸಂಭವನೀಯತೆಯ ಅಭಿವ್ಯಕ್ತಿ ಮಹತ್ವದ್ದು ಎಂದರು.
ಶೈಲಿ ಹಾಗೂ ತಂತ್ರಗಳೇ ಸಣ್ಣ ಕಥೆಗಳ ಜೀವಾಳ. ತಂತ್ರಗಳನ್ನು ಬಳಸಿಕೊಂಡು ಗ್ರಹಿಕೆಯ ನೆಲೆಗಳನ್ನು ವಿಸ್ತರಿಸಿಕೊಳ್ಳಬೇಕು. ನಿರಂತರ ಪ್ರಯತ್ನ ಹಾಗೂ ಪರಿಷ್ಕರಣೆ ಅತ್ಯವಶ್ಯ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಡಾ. ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, ಕೃತಿಯು ಸಮಕಾಲೀನ ಸಮಸ್ಯೆಗಳ ಅಭಿವ್ಯಕ್ತಿ ಆಗಿದೆ. ಇದರ ಮೂಲ ನೆಲೆ ಕುಟುಂಬವಾಗಿದೆ. ಸಂಬAಧಗಳು ದೂರವಾಗುತ್ತಿರುವ ದಿನಗಳಲ್ಲಿ ಈ ಕಥೆಗಳನ್ನು ಓದಿ ಆನಂದ ಪಡುವಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ದುಶ್ಯಂತ ನಾಡಗೌಡ ಮಾತನಾಡಿ, ಸಾಹಿತ್ಯ ವಾಸ್ತವದ ಘಟನೆಗಳ ಮೇಲೆ ಸಂಭಾವ್ಯತೆಗಳನ್ನು ಕಟ್ಟಿಕೊಡುತ್ತದೆ. ಅತೃಪ್ತಿಯೇ ಕವನ- ಕಥೆಗಳಿಗೆ ಮೂಲ ಕಾರಣ ಎಂದರು.
ಸುನಿತಾ ಮೂರಶಿಳ್ಳಿ, ಪ್ರತಿಭಾ ಪಾಟೀಲ, ಸುವರ್ಣಾ ತಾಂಡೂರ, ಇತರರಿದ್ದರು.
ಲೇಖಕಿ ಪುಷ್ಪಾ ಹಾಲಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ ಕುಲಕರ್ಣಿ ನಿರೂಪಿಸಿದರು. ಮೇಘಾ ಹುಕ್ಕೇರಿ ಪ್ರಾರ್ಥಿಸಿದರು. ಬಸವಂತಿ ಇಂಗಳಳ್ಳಿ ಸ್ವಾಗತಿಸಿದರು.