

ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಾಂಗನೀಸ್ ರಸ್ತೆ ವಾರ್ಫ್ ಪರಿಸರದಲ್ಲಿ ಎಲ್ಲೆಡೆ ಕೊಳಚೆ ನೀರು ನಿಂತಿದ್ದು, ನಿಂತ ನೀರಿನಲ್ಲಿ ತ್ಯಾಜ್ಯ ಕೊಳೆತು ನಾರುತ್ತಿದೆ. ಇದರಿಂದ ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.
ಗಂಗೊಳ್ಳಿಯ ವ್ಯಾಂಗನೀಸ್ ವಾರ್ಫ್ ಪರಿಸರ ಬೋಟುಗಳನ್ನು ನಿಲ್ಲಿಸುವ ಸ್ಥಳ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿದ್ದು ಬಂದರು ಇಲಾಖೆ ದಿವ್ಯ ಮೌನ ವಹಿಸಿದೆ. ಮಳೆಗಾಲದಲ್ಲಿ ಬೋಟು ನಿಲ್ಲಿಸುವ ಜಾಗದಲ್ಲಿ ಮಳೆ ನೀರು ನಿಂತಿದ್ದು, ನೀರಿನಲ್ಲಿ ತ್ಯಾಜ್ಯಗಳು ಸೇರಿಕೊಂಡು ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದೆ. ವ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ತ್ಯಾಜ್ಯ ಹೆಚ್ಚಾಗುತ್ತಿದ್ದು, ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿ ತ್ಯಾಜ್ಯಗಳ ದುರ್ನಾತ ಪರಿಸರದ ಜನರನ್ನು ಕಂಗೆಡಿಸಿದೆ. ಸಂಜೆ ಬಳಿಕ ಸೊಳ್ಳೆ ಕಾಟ ಹೆಚ್ಚಾಗಿದ್ದು, ಜನ ಹೈರಾಣು ಆಗಿದ್ದಾರೆ.
ಬೋಟು ರಿಪೇರಿ ಮತ್ತಿತರ ವಸ್ತುಗಳನ್ನು ಸ್ಥಳದಲ್ಲೇ ರಾಶಿ ಹಾಕಲಾಗಿದ್ದು, ಮಳೆಗಾಲದಲ್ಲಿ ತ್ಯಾಜ್ಯ ಕೊಳೆತು ಪರಿಸರದಲ್ಲಿ ಸಾಂಕ್ರಾಮಿಕ ರೋಗ ಹಬ್ಬುವ ಭೀತಿ ಆವರಿಸಿದೆ. ಸುತ್ತಮುತ್ತಲಿನ ಮನೆಗಳಲ್ಲಿ ಸೊಳ್ಳೆ ಮತ್ತಿತರ ಕ್ರಿಮಿಕೀಟಕಗಳ ಹಾವಳಿ ವ್ಯಾಪಕವಾಗಿದ್ದು ಮಲೇರಿಯಾ, ಫೈಲೇರಿಯಾ, ಡೆಂಘೆ ಮತ್ತಿತರ ರೋಗಗಳು ಹರಡುವ ಭೀತಿ ಜನರನ್ನು ಕಾಡುತ್ತಿದೆ.
ಪ್ರತಿ ವರ್ಷ ಸಾವಿರಾರು ರೂ. ತೆರಿಗೆ ವಸೂಲಿ ವಾಡುತ್ತಿರುವ ಬಂದರು ಇಲಾಖೆ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ಯಾವುದೇ ಕ್ರಮಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ವಾರಣಾಂತಿಕ ಕಾಯಿಲೆಗಳು ಉಲ್ಭಣಿಸುತ್ತಿರುವ ಈ ಸಂದರ್ಭದಲ್ಲಿ ಸ್ಥಳೀಯಾಡಳಿತವಾಗಲಿ ಅಥವಾ ಸಂಬಂಧಪಟ್ಟ ಇಲಾಖೆ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬರುತಿದೆ.
ವ್ಯಾಂಗನೀಸ್ ವಾರ್ಫ್ ಪರಿಸರದ ನೈರ್ಮಲ್ಯ ಕಾಪಾಡುವ ಭರವಸೆ ನೀಡಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆ ಬಳಿಕ ಈ ಪ್ರದೇಶದತ್ತ ಮತ್ತು ಈ ಪರಿಸರದ ಸಮಸ್ಯೆಗಳ ಬಗ್ಗೆ ಕಣ್ಣೆತ್ತಿಯೂ ನೋಡುತ್ತಿಲ್ಲ. ಜನರ ಕಷ್ಟ ಅವರಿಗೆ ತಿಳಿಯುತ್ತಿಲ್ಲ. ಪರಿಸರದ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ವ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ನಿಂತ ನೀರಿನಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು ತ್ಯಾಜ್ಯದ ವಾಸನೆಯಿಂದ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಜೆ ಬಳಿಕ ನುಸಿ ಕಾಟ ಹೆಚ್ಚಾಗುತ್ತದೆ. ಹೀಗಾಗಿ ಪರಿಸರದ ಜನರ ಆರೋಗ್ಯ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಬಂದರು ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯಾಡಳಿತ ವ್ಯಾಂಗನೀಸ್ ವಾರ್ಫ್ ಶುಚಿಗೊಳಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಶ್ರೀನಿವಾಸ, ಸ್ಥಳೀಯ ನಿವಾಸಿ ಆರೋಗ್ಯ ಇಲಾಖೆ ಮೂಲಕ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಪರಿಸರವನ್ನು ಸ್ವಚ್ಛವಾಗಿಡುವಂತೆ ಮನವಿ ವಾಡುತ್ತಿದ್ದಾರೆ. ಮಳೆಗಾಲದ ಸಮಯ ಸೊಳ್ಳೆಗಳು ಹೆಚ್ಚಾಗಿದ್ದು, ಸೊಳ್ಳೆಗಳು ಉತ್ಪತ್ತಿಯಾಗದಂತೆ ಜನರು ಎಚ್ಚರಿಕೆ ವಹಿಸಬೇಕು. ಡಾ.ಅಮಿತಾ, ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ. https://www.vijayavani.net/parents-should-supervise-their-children https://www.vijayavani.net/rising-river-levels-turbulent-seas