ಕಸದ ರಾಶಿಗೆ ಬೆಂಕಿ, ವ್ಯಾಪಿಸಿದ ಹೊಗೆ

17
Published on

ಮೈಸೂರು: ವಿದ್ಯಾರಣ್ಯಪುರಂನಲ್ಲಿರುವ ಕಸದ ರಾಶಿಗೆ ಬೆಂಕಿ ಬಿದ್ದು, ಸುಮಾರು ಅರ್ಧ ಕಿ.ಮೀ. ತ್ಯಾಜ್ಯ ಹೊತ್ತಿ ಉರಿದಿದೆ.

ಸಿವೇಜ್ ಫಾರಂನ ತ್ಯಾಜ್ಯದ ರಾಶಿಗೆ ಭಾನುವಾರ ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಿದೆ. ಸುಮಾರು 5ರಿಂದ 6 ಕಸದ ಗುಡ್ಡೆಗಳು ಬೆಂಕಿಯಿಂದ ಹೊತ್ತಿ ಉರಿದಿವೆ. ಬಿಸಿಲ ಧಗೆಗೆ ಬೆಂಕಿ ಕ್ಷಣ ಮಾತ್ರದಲ್ಲಿ ವ್ಯಾಪಿಸಿ ಸುಮಾರು ಅರ್ಧ ಕಿ.ಮಿ.ನಷ್ಟು ತ್ಯಾಜ್ಯ ಸುಟ್ಟಿದೆ. ತ್ಯಾಜ್ಯ ಸುಟ್ಟಿದ್ದರಿಂದ ಹೊಗೆ ಮುಗಿಲೆತ್ತರ ವ್ಯಾಪಿಸಿದ್ದಲ್ಲದೇ ಕಸದ ದುರ್ವಾಸನೆ ಸುತ್ತ ಮುತ್ತಲ ಪ್ರದೇಶವನ್ನು ವ್ಯಾಪಿಸಿತ್ತು. ಅಗ್ನಿಶಾಮಕದಳದ 40 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಕಸದ ರಾಶಿ ಹಾಗೂ ತ್ಯಾಜ್ಯದ ಹೊಗೆಯ ದಟ್ಟವಾಗಿ ಹರಡಿದ್ದರಿಂದ ವಾತಾವರಣದಲ್ಲಿ ಕೆಟ್ಟ ವಾಸನೆಯೂ ಹೆಚ್ಚಾಗಿ ಹರಡಿತ್ತು. ಬಡಾವಣೆಯಲ್ಲಿ ವಾಸಿಸುವ ಜನರು ಕೆಲ ಕಾಲ ಮೂಗು ಹಿಡಿದುಕೊಂಡೇ ಓಡಾಡುತ್ತಿದ್ದ ದೃಶ್ಯಗಳು ಕಂಡು ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net