ಮಡಿಕೇರಿಯಲ್ಲಿ ರಾರಾಜಿಸುತ್ತಿದೆ ಕಸ

25adarshkdga14
Published on

ಮಡಿಕೇರಿ: ಮಡಿಕೇರಿ ಜನೋತ್ಸವ ಕಾರ್ಯಕ್ರಮದಲ್ಲಿ ವ್ಯಾಪಾರ ವಹಿವಾಟಿನ ಕಸವೆಲ್ಲ ನಗರಾದ್ಯಂತ ತುಂಬಿ ಕಸದಿಂದ ರಾರಾಜಿಸುತ್ತಿತ್ತು.


ಪ್ರವಾಸಿಗರು, ಸ್ಥಳೀಯರು, ಸಾರ್ವಜನಿಕರು ಸೇರಿದಂತೆ ದೂರದೂರಿನಿಂದ ಆಗಮಿಸಿದ ವ್ಯಾಪಾರಸ್ಥರು ಕಂಡ ಕಂಡಲ್ಲಿ ಕಸವನ್ನ ಎಸೆದ ಪರಿಣಾಮ ನಗರ ಅಶುಚಿತ್ವ ತುಂಬಿ ತುಳುಕುತ್ತಿತ್ತು. ಕಬ್ಬಿನ ಜಲ್ಲೆ, ತಂಪುಪಾನಿಗಳ ಬಾಟಲ್ಸ್, ಐಸ್ ಕ್ರೀಂನ ಕವರ್, ನೀರಿನ ಬಾಟಲಿಗಳು, ಸೇರಿದಂತೆ ವಿವಿಧ ಪಾನೀಯಗಳ ಕವರ್‌ಗಳು ನಗರದಾದ್ಯಂತ ರಾರಾಜಿಸುತ್ತಿತ್ತು.


ಶೋಭಯಾತ್ರೆಯಲ್ಲಿ ಪಟಾಕಿ ಸಿಡಿಸಿದ ಪೇಪರ್ ಹಾಗೂ ಇತ್ಯಾದಿ ವಸ್ತುಗಳು ರಸ್ತೆಯಲ್ಲಿ ರಾರಾಜಿಸುತ್ತಿತ್ತು. ಶೋಭಯಾತ್ರೆ ನೋಡಲು ಬಂದಿದ್ದ ಪ್ರವಾಸಿಗರ ಮತ್ತು ಜಿಲ್ಲೆಯ ಜನತೆಯ ಚಪ್ಪಲಿಗಳು ರಸ್ತೆಯಲ್ಲಿ ಕಂಡುಬರುತ್ತಿತ್ತು. ಪೀಪಿ ಬ್ಯಾನ್ ಮಾಡಿದ ಪರಿಣಾಮ ರಸ್ತೆಗಳಲ್ಲಿ ಪೀಪಿಗಳ ತುಂಡುಗಳು ಕಂಡುಬರಲಿಲ್ಲ. ನಗರಸಭೆ ಎಚ್ಚೆತ್ತುಕೊಂಡು ನಗರವನ್ನು ಶುಚಿಗೊಳಿಸಿ, ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net