

ಶುದ್ಧ ನೀರಿನ ಘಟಕದ ಬಳಿ ತ್ಯಾಜ್ಯ ವಿಂಗಡಣೆ | ಪಾಲಿಕೆಯ ಬೇಜವಾಬ್ದಾರಿಗೆ ಆಕ್ರೋಶ
ವಿಜಯವಾಣಿ ಸುದ್ದಿಜಾಲ ತುಮಕೂರು
ನಗರದ ವಿವಿಧ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸುವ ವಿದ್ಯಾನಗರದ ಪಂಪ್ ಹೌಸ್ ಇದೀಗ ಕಸ
ವಿಂಗಡಣೆ ಟಕವಾಗಿ ಮಾರ್ಪಟ್ಟಿದೆ. ಇದು ಮಹಾನಗರ ಪಾಲಿಕೆಯ ಬೇಜವಾಬ್ದಾರಿತನಕ್ಕೆ ಕನ್ನಡಿ ಹಿಡಿದಂತಿದೆ!.
ತುಮಕೂರಿನ ಅರ್ಧ ನಗರಕ್ಕೆ ನೀರು ಪೂರೈಸುತ್ತಿದ್ದ ವಿದ್ಯಾನಗರ ಪಂಪ್ ಹೌಸ್ ಅತ್ಯಂತ ಹಳೇಯದು. ಈ ಪಂಪ್ ಹೌಸ್ ಅನ್ನು ಇತ್ತೀಚಿಗೆ ಆಧುನೀಕರಣಗೊಳಿಸಿದ್ದು, 20 ಲಕ್ಷ ಲೀಟರ್ ಸಾಮರ್ಥ್ಯದ ವಿದ್ಯಾನಗರ ಪಂಪ್ ಹೌಸ್ನಿಂದ ನಗರದ ವಿವಿಧ ಬಡಾವಣೆಗಳ ಓವರ್ ಹೆಡ್ ಟ್ಯಾಂಕ್ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಈ ಜಾಗದಲ್ಲೇ ಮನೆ, ಮನೆಗಳಿಂದ ಸಂಗ್ರಹಿಸಿದ ಆಟೋಗಳಿಂದ ಒಣ ಕಸ, ಹಸಿ ಕಸ ಬೇರ್ಪಡಿಸಿ ದೊಡ್ಡ ಲಾರಿಗಳಿಗೆ ತುಂಬಿಸಿ ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಟಕಕ್ಕೆ ಸಾಗಿಸುವ ಕಾರ್ಯ ಸಾಂಗೋಪವಾಗಿ ನಡೆಯುತ್ತಿರುವುದು ಆತಂಕಕಾರಿ ಎನಿಸಿದೆ.
ನೀರು ಕಲುಷಿತಗೊಳ್ಳುವ ಭೀತಿ: ವಿದ್ಯಾನಗರ ಪಂಪ್ ಹೌಸ್ ಆವರಣದಲ್ಲೇ ಕಸ ಬೇರ್ಪಡಿಸುವ ಟಕವನ್ನು ಆರಂಭಿಸಿದ್ದು, ಮಳೆಗಾಲದಲ್ಲಿ ಈ ಕಸದ ತ್ಯಾಜ್ಯ ನೀರು ಪಂಪ್ ಹೌಸ್ ಶುದ್ಧೀಕರಣ ಟಕ ಸೇರುವ ಸಾಧ್ಯತೆ ಇದೆ. ಈ ತ್ಯಾಜ್ಯ ಬೇರ್ಪಡಿಕೆ ಟಕ ಯೋಜನೆ ಅನಾರೋಗ್ಯಕರವಾಗಿದ್ದು, ಶುದ್ಧ ನೀರಿನ ಘಟಕದಲ್ಲಿ ಕಸದ ವಿಭಜನೆಯಿಂದ ಡೆಂಘೆ ಸೇರಿದಂತೆ ನಾನಾ ರೋಗಗಳು ಹರಡುವ ಸಾಧ್ಯತೆ ಇದೆ. ಕಸ ಸಂಗ್ರಹಿಸುವ ಆಟೋಗಳು ಹಾಗೂ ಕಸ ತುಂಬುವ ದೊಡ್ಡ ಲಾರಿಗಳಿಂದ ಕಸ ಚೆಲ್ಲಿ ಮಳೆಗಾಲದಲ್ಲಿ ತ್ಯಾಜ್ಯ ನೀರು ಶುದ್ಧ ನೀರಿನ ಟಕಗಳ ಸೇರಲಿದೆ. ಕಸದ ಲಾರಿ ತ್ಯಾಜ್ಯ ನೀರು ಹರಿದು ಶುದ್ಧ ನೀರಿನಲ್ಲಿ ಮಿಶ್ರಣವಾಗಲಿದೆ. ಅಲ್ಲದೆ, ಕೆಟ್ಟ ವಾಸನೆ ಉಂಟಾಗಿ ವಿದ್ಯಾನಗರ ನಿವಾಸಿಗಳು ಮೂಗುಮುಚ್ಚಿಕೊಂಡು ಓಡಾಡುವ ಆತಂಕ ಎದುರಾಗಲಿದೆ. ಇನ್ನಾದರೂ ಪಾಲಿಕೆ ಪರಿಸರ, ಆರೋಗ್ಯ ಶಾಖೆ ಸಿಬ್ಬಂದಿ ಇಂತಹ ಅವೈಜ್ಞಾನಿಕ ಕಸ ಬೇರ್ಪಡಿಕೆ
ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂಬುದು ಸ್ಥಳಿಯರ ಆಗ್ರಹವಾಗಿದೆ. ಆ ಮೂಲಕ ಶುದ್ಧ ನೀರಿನ ಟಕದಲ್ಲಿ ಶುದ್ಧತೆ ಮತ್ತು ಆರೋಗ್ಯ ಕಾಪಾಡಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.
ಓವರ್ಹೆಡ್ ಟ್ಯಾಂಕ್ಗಳಿಗೆ ನೀರು ಸರಬರಾಜು: ವಿದ್ಯಾನಗರ, ಕುವೆಂಪುನಗರ, ಡೆವರ್ಸ್ ಕಾಲನಿ ಹಾಗೂ ಹನುಮಂತಪುರ ಓವರ್ ಹೆಡ್ ಟ್ಯಾಂಕ್ಗಳಿಗೆ ಹಾಗೂ ಅಶೋಕ ನಗರ, ಗಂಗೋತ್ರಿ ನಗರ, ದೇವರಾಯಪಟ್ಟಣ ಹಾಗೂ ಶ್ರೀನಗರ ಬಡಾವಣೆಯ ಓವರ್ ಹೆಡ್ ಟ್ಯಾಂಕ್ಗಳಿಗೆ ಈ ಪಂಪ್ ಹೌಸ್ನಿಂದ ನೀರು ಸರಬರಾಜು ಮಾಡಲಾಗುತ್ತಿದೆ.
ಮನೆ, ಮನೆಗಳಿಂದ ಸಂಗ್ರಹಿಸಿದ ಕಸ ಬೇರ್ಪಡಿಕೆ ವೇಳೆ ತ್ಯಾಜ್ಯದ ನೀರು ಶುದ್ಧ ನೀರಿಗೆ ಮಿಶ್ರಣವಾಗುವ ಹಾಗೂ ದುರ್ವಾಸನೆ ಹರಡಲಿದೆ. ಶುದ್ಧ ನೀರಿನ ಟಕದಲ್ಲಿ ತ್ಯಾಜ್ಯ ಬೇರ್ಪಡಿಕೆ ಟಕ ಆರಂಭಿಸಿರುವುದು ಅವೈಜ್ಞಾನಿಕ. ಕೂಡಲೆ ಈ ಕಾರ್ಯವನ್ನು ಬೇರೆಡೆಗೆ ಸ್ಥಳಾಂತರಿಸಿ, ಶುದ್ಧತೆ ಮತ್ತು ಆರೋಗ್ಯ ಕಾಪಾಡಬೇಕು.ಎಸ್. ಕುಮಾರಸ್ವಾಮಿಕಾರ್ಯದರ್ಶಿ, ವಿದ್ಯಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ತುಮಕೂರು
ವಿದ್ಯಾನಗರ ಪಂಪ್ ಹೌಸ್ನಲ್ಲಿ ಕಸ ಬೇರ್ಪಡಿಸುವ ಕಾರ್ಯ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ತಕ್ಷಣವೇ ಅದನ್ನು ನಿಲ್ಲಿಸಿ ಬೇರೆ ಕಡೆ ಸ್ಥಳಾಂತರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಿ.ವಿ.ಅಶ್ವಿಜ ಆಯುಕ್ತರು, ಮಹಾನಗರ ಪಾಲಿಕೆ