

ದೇವದುರ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ, ಪುರಸಭೆಯಿಂದ ಪಟ್ಟಣದಲ್ಲಿ ಭಾನುವಾರ ಜಾಗೃತಿ ಜಾಥಾ ಜರುಗಿತು.
ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ಉಪನ್ಯಾಸಕರು, ಸಂಘ-ಸಂಸ್ಥೆಗಳ ಪ್ರಮುಖರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಕಸ ವಿಲೇವಾರಿ ವಾಹನದ ಮೂಲಕ ಜಾಗೃತಿ ಸಂದೇಶ ಸಾರಲಾಯಿತು. ಅಂಬೇಡ್ಕರ್ ವೃತ್ತದಿಂದ ಎಪಿಎಂಸಿ ರಸ್ತೆ, ಬಸ್ ನಿಲ್ದಾಣ ಮುಂಭಾಗ, ಜೆಪಿ ವೃತ್ತ, ಕೆಇಬಿ ರಸ್ತೆ, ಮಿನಿವಿಧಾನಸೌಧ ರಸ್ತೆ ಸೇರಿ ವಿವಿಧೆಡೆ ಜಾಗೃತಿ ಮೂಡಿಸಲಾಯಿತು.
ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿ ಜಾಥಾಕ್ಕೆ ಚಾಲನೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ವಿ.ಆರ್.ಬಳ್ಳಾರಿ, ಪ್ರಮುಖರಾದ ಗಂಗಮ್ಮ, ಕಮಲಾಕ್ಷಿ, ನಿರ್ಮಲಾ, ಲಕ್ಷ್ಮೀ ರಾಠೋಡ್, ಭಾಗ್ಯ, ಶೃತಿ, ಅಂಬಿಕಾ, ವೆಂಕಟೇಶ ಕುಲಕರ್ಣಿ, ಎಚ್.ಶಿವರಾಜ ಇದ್ದರು.