ಕಸ ವಿಲೇವಾರಿ, ಒಳಚರಂಡಿ ಸ್ವಚ್ಛತೆ ಸ್ಥಗಿತ

27 MUL 1
Published on

ಮುಳಗುಂದ: ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿನ ಪೌರಕಾರ್ಮಿಕರು ಮಂಗಳವಾರ ಪಟ್ಟಣ ಪಂಚಾಯ್ತಿ ಮುಂಭಾಗ ಮುಷ್ಕರ ಆರಂಭಿಸಿದರು. ನೀರು ಸರಬರಾಜು, ವಿದ್ಯುತ್ ನಿರ್ವಹಣೆ ಹೊರತುಪಡಿಸಿ ಸ್ವಚ್ಛತೆ, ಕಸ ಸಂಗ್ರಹ, ವಿಲೇವಾರಿ, ಒಳಚರಂಡಿ ನಿರ್ವಹಣೆ ಹಾಗೂ ಕಚೇರಿ ಕೆಲಸ ಸ್ಥಗಿತಗೊಳಿಸಲಾಗಿತ್ತು. ಪೌರಕಾರ್ಮಿಕರ ಮುಷ್ಕರಕ್ಕೆ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಎಲ್. ಕರೇಗೌಡ್ರ, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಜಿಲ್ಲಾ ಸಮಿತಿ ಸದಸ್ಯ ರಮೇಶ ಎಂ. ಮ್ಯಾಗೇರಿ ಬೆಂಬಲ ಸೂಚಿಸಿದರು. ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನೀಲಪ್ಪ ದೊಡ್ಡಮನಿ, ಉಮಾ ಗದಗಿನ, ಬಸವಣ್ಣೆಪ್ಪ ಹೊರಪೇಟಿ, ಇಮಾಮಸಾಬ್ ಕಾಲನಾಯ್ಕರ, ವಾಣಿಶ್ರೀ ನಿರಂಜನ, ರೇಖಾ ಹೊಸಮನಿ, ಬಸವರಾಜ ಮೊಕಾಶಿ, ಹನುಮಂತ ಕೇಳಗೇರಿ, ದಾವಲಪ್ಪ ನಡುಗೇರಿ, ಗಾಯಿತ್ರಿ ಚಲವಾದಿ, ಮುತ್ತಕ್ಕ ನಾಯ್ಕರ, ಮಹಾಂತಪ್ಪ ದಿವಟರ, ಪರಶುರಾಮ ಸಣ್ಣತಮ್ಮಣ್ಣವ, ಅರ್ಜುನ ಮ್ಯಾಗೇರಿ, ಶಂಭು ಚವ್ಹಾಣ, ಮುನೀರ್ ನದಿಮುಲ್ಲಾ ಭಾಗವಹಿಸಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net