

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಟೋಲ್ ನಾಕಾದಿಂದ ಲಕ್ಷ್ಮೀಸಿಂಗನಕೇರಿಗೆ ಹೋಗುವ ರಸ್ತೆಯ ಮೇಲೆ ಕಸ ಎಸೆಯಲಾಗುತ್ತಿದೆ. ಇದರಿಂದ ಅಕ್ಕಪಕ್ಕದ ಅಂಗಡಿಕಾರರಿಗೆ ತೊಂದರೆಯಾಗುತ್ತಿದೆ.
ರಸ್ತೆಯ ಒಂದು ಬದಿಯ ಚರಂಡಿ ನಿರ್ಮಾಣ ಕಾರ್ಯ ನಡೆದಿದೆ. ಚರಂಡಿಯ ಮಣ್ಣನ್ನು ರಸ್ತೆಗುಂಟ ಹಾಕಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಮೊದಲೇ ಸಮಸ್ಯೆಯಾಗಿದೆ. ಕೆಲ ದಿನಗಳಿಂದ ಸ್ಥಳೀಯರು ಕಸ ತಂದು ರಸ್ತೆ ಮೇಲೆಯೇ ಚೆಲ್ಲುತ್ತಿದ್ದಾರೆ. ರಸ್ತೆಗುಂಟ ಅಂಗಡಿಗಳಿದ್ದು, ಗಲೀಜು ವಾತಾವರಣ ನಿರ್ಮಾಣವಾಗಿದೆ. ಅಂಗಡಿಕಾರರು ಗಲೀಜು ಮತ್ತು ದುರ್ವಾಸನೆಯಿಂದ ತೀವ್ರ ತೊಂದರೆಯಾಗುತ್ತಿದೆ.
ಸ್ಥಳೀಯರು ಮೊದಲಿನಿಂದಲೂ ಇಲ್ಲಿ ಕಸ ಎಸೆಯುತ್ತಿದ್ದರು. ಪಾಲಿಕೆಯವರು ಬಿದಿರಿನ ಚೌಕಟ್ಟು ನಿರ್ಮಿಸಿ `ಕಸ ಹಾಕಿದರೆ ದಂಡ ವಿಽಸಲಾಗುವುದು' ಎಂಬ ಫಲಕ ಅಳವಡಿಸಿದ್ದರು. ಕೆಲ ದಿನ ಕಸ ಚೆಲ್ಲುವುದು ಕಡಿಮೆಯಾಗಿತ್ತು. ಕೆಲ ದಿನಗಳಿಂದ ಮತ್ತೆ ಮುಂದುವರಿದಿದ್ದು, ಪಾಲಿಕೆಯವರು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಸ್ಟೀಲ್ ಅಂಗಡಿ ಮಾಲೀಕ ವಿಜಯಕುಮಾರ ದೇವರಮನಿ ಆಗ್ರಹಿಸಿದ್ದಾರೆ.