ಕಸ ವಿಲೇವಾರಿ ಪರಿಶೀಲಿಸಿದ ಪಾಲಿಕೆ ಆಯುಕ್ತ ಅಶೋಕ

7Ravig5-Web
ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಕಸ ವಿಲೇವಾರಿ ವಾಹನದಲ್ಲೇ ಸಂಚರಿಸಿ, ಕಸ ವಿಲೇವಾರಿ ಕಾರ್ಯ ಪರಿಶೀಲಿಸಿದರು.
Published on

ಬೆಳಗಾವಿ: ಸೋಮವಾರ ಬೆಳ್ಳಂಬೆಳಗ್ಗೆ ಸೈಕಲ್ ಏರಿ ಕಸ ವಿಲೇವಾರಿ ವಾಹನ ಶಾಖೆಗೆ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ದಿಢೀರ್ ಭೇಟಿ ನೀಡಿ, ಕಸ ವಿಲೇವಾರಿ ವಾಹನದಲ್ಲೇ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಕಾರ್ಮಿಕರ ಹಾಜರಾತಿ ಹಾಗೂ ಕಸ ವಿಲೇವಾರಿ ಕಾರ್ಯ ಪರಿಶೀಲಿಸಿದರು.
ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ತೆರಳಿ ವಾಹನಗಳನ್ನು ಹಾಗೂ ಚಾಲಕರ ಹಾಜರಾತಿ ಪರಿಶೀಲಿಸಿ ಬಯೋಮೆಟ್ರಿಕ್ ಅಳವಡಿಸುವಂತೆ, ಬೆಳಗ್ಗೆ 5.30 ಕರ್ತವ್ಯಕ್ಕೆ ಹಾಜರಾಗಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಚಾಲಕರು, ಕ್ಲೀನರ್ಸ್‌ಗಳಿಗೆ ಸೂಚಿಸಿದರು.

ಕಸ ಸಂಗ್ರಹ ವಾಹನದಲ್ಲಿ ಕುಳಿತು ಫೋರ್ಟ್ ರಸ್ತೆಯ ಡಿಸಿಸಿ ಬ್ಯಾಂಕ್ ಹತ್ತಿರ ಸಮಯಕ್ಕೆ ಸರಿಯಾಗಿ ಕಸ ವಿಲೇವಾರಿ ಮಾಡುವಂತೆ ನೈರ್ಮಲ ನಿರೀಕ್ಷಕರಿಗೆ, ಪೌರಕಾರ್ಮಿಕರಿಗೆ ಕೈಗವಸು, ಅಗತ್ಯ ಸಲಕರಣೆ ಒದಗಿಸುವಂತೆ ಗುತ್ತಿಗೆದಾರರಿಗೆ ತಿಳಿಸುವಂತೆ ನಿರ್ದೇಶಿಸಿದರು.
ವಾರ್ಡ್- 43ರ ವರೆಗೆ ಕಸ ಸಂಗ್ರಹ ವಾಹನದಲ್ಲಿ ಸಂಚರಿಸಿ ಪಾಲಿಕೆ ಸದಸ್ಯೆ ವಾಣಿ ವಿಲಾಸ ಜೋಶಿ ಅವರೊಂದಿಗೆ ಅನಗೋಳ ಸ್ಮಶಾನದ ಸ್ಥಳ ಪರಿಶೀಲಿಸಿ, ಸ್ವಚ್ಛತೆ ಕಾಪಾಡುವಂತೆ, ಸಸಿಗಳನ್ನು ನೆಡುವಂತೆ, ವಿದ್ಯುತ್ ದೀಪಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅತಿಕ್ರಮಣ ಮಾಡಿ ಕಟ್ಟಡ ಕಟ್ಟುತ್ತಿರುವ ಕಟ್ಟಡದ ಪರಿಶೀಲಿಸಿ ಸಂಬಂಧಿತರಿಗೆ ಪಾಲಿಕೆಗೆ ವಿವರ ಸಲ್ಲಿಸುವಂತೆ ಸೂಚಿಸಿದರು.ಭಾಗ್ಯನಗರ 1 ಮತ್ತು 2ನೇ ಕ್ರಾಸ್‌ಗೆ ತೆರಳಿ, ಕಸ ವಿಲೇವಾರಿ, ನಾಲಾಗಳ ಸ್ವಚ್ಛತೆ, ಪಾಲಿಕೆ ಖುಲ್ಲಾ ಜಾಗಗಳನ್ನು ಪರಿಶೀಲಿಸಿ, ಸ್ವಚ್ಛತೆ ಕಾಪಾಡುವಂತೆ ಸಂಬಂಧಿಸಿದವರಿಗೆ ದುಡಗುಂಟಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net