

ರಟ್ಟಿಹಳ್ಳಿ: ಪಟ್ಟಣದ ಸರ್ಕಾರಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಮೈದಾನದ ಸುತ್ತಲಿರುವ ಗಟಾರವು ಪಟ್ಟಣದ ವಿವಿಧೆಡೆಯ ತ್ಯಾಜ್ಯ ಬಂದು ಸೇರುವ ಕಾಲುವೆಯಂತಾಗಿದ್ದು, ಸುತ್ತಲಿನ ಪ್ರದೇಶವೆಲ್ಲ ದುರ್ವಾಸನೆಯಿಂದ ಕೂಡಿದೆ.
ಗಟಾರದ ಮೇಲೆ ಶಾಲೆಯ ಕೊಠಡಿ ನಿರ್ವಣವಾಗಿರುವುದರಿಂದ ಗಟಾರ ತುಂಬಿದರೆ ಒಂದು ಬದಿಯ ತ್ಯಾಜ್ಯವೆಲ್ಲ ಬಂದು ಶಾಲಾ ಆವರಣದಲ್ಲಿ ಶೇಖರಣೆಯಾಗುತ್ತದೆ. ಮತ್ತೊಂದು ಬದಿಯ ತ್ಯಾಜ್ಯ ಖೋಖೋ ಆಟದ ಮೈದಾನವನ್ನು ಆವರಿಸಿಕೊಂಡು ಮಕ್ಕಳು ಆಟವಾಡಲು ಬಾರದಂತ ಸ್ಥಿತಿ ನಿರ್ವಣವಾಗಿದೆ.
ಪಟ್ಟಣದಲ್ಲಿರುವ ಸರ್ಕಾರಿ ಮಾದರಿ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಾಗಿ ಸುಸಜ್ಜಿತವಾದ ಆಟದ ಮೈದಾನ ಇದೆ. ತಾಲೂಕಿನ ವಿವಿಧ ಶಾಲಾ ಮಟ್ಟದ ಕ್ರೀಡಾಕೂಟಗಳು ಈ ಮೈದಾನದಲ್ಲಿಯೇ ನಡೆಯುತ್ತವೆ. ಶಾಲೆಯ ಒಂದು ಬದಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಗೆ ಕೆಆರ್ಐಡಿಎಲ್ ವಿವೇಕ ಯೋಜನೆಯಡಿ 2022-23ನೇ ಸಾಲಿನಲ್ಲಿ 13.90 ಲಕ್ಷ ರೂ. ವೆಚ್ಚದಲ್ಲಿ ಒಂದು ಶಾಲೆಯ ಕೊಠಡಿಯನ್ನು ಮಂಜೂರು ಮಾಡಲಾಗಿದೆ. ಈಗಾಗಲೇ ಈ ಕೊಠಡಿ ನಿರ್ಮಾಣ ಹಂತದಲ್ಲಿದ್ದು, ಈ ಕೊಠಡಿಯನ್ನು ನಿರ್ಮಾಣ ಮಾಡುವ ವೇಳೆ ಗಟಾರದ ಮೇಲೆ ಕೊಠಡಿಯ ಕಾಮಗಾರಿ ಮಾಡಿರುವುದರಿಂದ ಗಟಾರ ಸಂಪೂರ್ಣವಾಗಿ ಮುಚ್ಚಿ ಹೋಗಿದೆ.
2-3 ತಿಂಗಳಿಂದ ಕಾಮಗಾರಿ ಆರಂಭಿಸಲಾಗಿದ್ದು, ಗಟಾರ ಬ್ಲಾಕ್ ಆಗಿರುವುದರಿಂದ ಮೈದಾನದಲ್ಲಿ ನಿಂತ ತ್ಯಾಜ್ಯ ದುರ್ವಾಸನೆ ಬೀರುತ್ತಿದೆ. ಗಟಾರದ ಪಕ್ಕದಲ್ಲಿ ಶಾಲೆಯ ಕೊಠಡಿ ಇರುವುದರಿಂದ ಮಕ್ಕಳಿಗೂ ದುರ್ವಾಸನೆ ಬೀರುತ್ತಿದೆ. ಹಲವು ದಿನಗಳಿಂದ ಮೈದಾನದಲ್ಲಿ ಶೇಖರಣೆಯಾದ ತ್ಯಾಜ್ಯದಿಂದ ಸೊಳ್ಳೆಗಳ ಕಾಟವೂ ವಿಪರೀತವಾಗಿದ್ದು, ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗ ಭೀತಿ ಶುರುವಾಗಿದೆ.
ಗಟಾರದ ಬದಿಯಲ್ಲಿ ಶಾಲೆಗೆ ಸಂಬಂಧಿಸಿದ ಬೋರ್ವೆಲ್ ಇದೆ. ಈ ಬೋರ್ವೆಲ್ನಿಂದ ಎರಡು ಶಾಲೆಗೆ ಅಡುಗೆ ಮತ್ತು ಇತರ ಕೆಲಸಗಳಿಗೆ ನೀರನ್ನು ಬಳಸಲಾಗುತ್ತದೆ. ಪದೇಪದೆ ಈ ಆವರಣದಲ್ಲಿ ಹೋಗಿ ಬೋರ್ವೆಲ್ ಆನ್, ಆಫ್ ಮಾಡಬೇಕಾಗಿದೆ. ಬೋರ್ವೆಲ್ ಸಂಪರ್ಕಸುವ ಕೇಬಲ್ ಸಹ ಕಲುಷಿತ ನೀರಿನಲ್ಲಿದ್ದು, ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ? ಎಂದು ಪಾಲಕರು ಪ್ರಶ್ನಿಸುತ್ತಾರೆ.
2 ತಿಂಗಳಿಂದ ಶಾಲೆಯ ಮೈದಾನದಲ್ಲಿನ ಗಟಾರವು ಮುಚ್ಚಿದೆ. ಮೈದಾನದಲ್ಲಿ ಕಲುಷಿತ ನೀರು ನಿಂತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಕಾಮಗಾರಿ ಆರಂಭಿಸುವ ವೇಳೆ ಇಲಾಖೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಗಟಾರ ಮುಚ್ಚಿದರೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ತಿಳಿಸಲಾಗಿತ್ತು. ಆದರೆ, ಈವರೆಗೂ ಅದನ್ನು ಪಾಲನೆ ಮಾಡಿಲ್ಲ. ಈಗ ಗಟಾರದ ಕಾಮಗಾರಿ ಆರಂಭಿಸಿ ಬಳಿಕ ಕೊಠಡಿಯ ಕಾಮಗಾರಿ ಮುಂದುವರಿಸಬೇಕು. | ಅಜ್ಜಪ್ಪ ಜಾಧವ, ಸಂತೋಷ ಬಾಜೀರಾಯ, ಪಾಲಕರು ಮುಚ್ಚಿಹೋಗಿರುವ ಗಟಾರವನ್ನು ಕೂಡಲೇ ತೆರವುಗೊಳಿಸಲಾಗುವುದು. ಎಸ್ಡಿಎಂಸಿ ಬೇಡಿಕೆಯಂತೆ ಮಾಸೂರು ರಸ್ತೆಯ ಬದಿಯಲ್ಲಿನ ಗಟಾರಕ್ಕೆ ಸಂರ್ಪಸುವ ಕುರಿತು 2 ದಿನಗಳಲ್ಲಿ ಕೆಲಸ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. | ಸಿದ್ದೇಶ, ವಿ.ಎ., ಕೆಆರ್ಐಡಿಎಲ್ ಸಹಾಯಕ ಇಂಜಿನಿಯರ್