

ಶಿಗ್ಗಾಂವಿ: ಪಟ್ಟಣದ ರಾಚನಕಟ್ಟೆ ಕೆರೆ ಪಕ್ಕದ ಹುಲಗೂರ ಬೈಪಾಸ್ ಮುಖ್ಯರಸ್ತೆಯಲ್ಲಿನ ಕಸವನ್ನು ಪುರಸಭೆ ವತಿಯಿಂದ ಭಾನುವಾರ ತೆರವುಗೊಳಿಸಲಾಯಿತು.
‘ರಾಚನಕಟ್ಟೆ ಕೆರೆ ಪಕ್ಕ ರಾಶಿ ಕಸ’ ಶೀರ್ಷಿಕೆಯಡಿ ವಿಜಯವಾಣಿ ದಿನಪತ್ರಿಕೆಯಲ್ಲಿ ಭಾನುವಾರ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳು, ಜೆಸಿಬಿ ಮತ್ತು ಟ್ರಾ್ಯಕ್ಟರ್ಗಳ ಮೂಲಕ ಕಸವನ್ನು ವಿಲೇವಾರಿ ಮಾಡುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
‘ರಾತ್ರಿ ಹೊತ್ತು ಇಲ್ಲಿ ಕಸ ಹಾಕುತ್ತಿರುವುದರಿಂದ ದುರ್ವಾಸನೆಯಿಂದ ವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿತ್ತು. ಹತ್ತಾರು ಸಲ ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆದರೆ, ವಿಜಯವಾಣಿ ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಬೆಳ್ಳಂಬೆಳಗ್ಗೆ ಪುರಸಭೆ ಅಧಿಕಾರಿಗಳು ಕಾರ್ವಿುಕರೊಂದಿಗೆ ಕಸ ವಿಲೇವಾರಿಗೆ ಮುಂದಾಗಿರುವುದು ಸಂತಸ ತಂದಿದೆ. ರಾತ್ರಿ ಹೊತ್ತು ಇಲ್ಲಿ ಕಸ ತಂದು ಹಾಕುವರ ವಿರುದ್ಧ ಕ್ರಮ ಕೈಗೊಳ್ಳಲು ಪುರಸಭೆಯವರು ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದರು.
------