

ಕೋಟ: ಕೋಟ ಗ್ರಾಪಂ ವ್ಯಾಪ್ತಿಯ ಮಣೂರು ರಾಷ್ಟ್ರೀಯ ಹೆದ್ದಾರಿ ನಡು ರಸ್ತೆಯಲ್ಲಿ ಕಂಡುಬಂದ ತ್ಯಾಜ್ಯದ ಚೀಲವನ್ನು ಕೋಟ ಗ್ರಾಪಂ ಮುತುವರ್ಜಿಯೊಂದಿಗೆ ಬುಧವಾರ ತೆರವುಗೊಳಿಸಿತು. ಮಂಗಳವಾರ ಸ್ಥಳಕ್ಕೆ ಕೋಟದ ಪಂಚವರ್ಣ ಸಂಘಟನೆ ಮಾಹಿತಿ ಮೇರೆಗೆ ಕೋಟ ಪಿಡಿಒ ಸುರೇಶ್ ಬಂಗೇರ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಬುಧವಾರ ಪಂಚಾಯಿತಿ ಎಸ್‌ಎಲ್‌ಆರ್‌ಎಂ ಘಟಕ ಮುಖ್ಯಸ್ಥೆ ಭವ್ಯ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.