

ಕುಶಾಲನಗರ:
ಕುಶಾಲನಗರದ ಕಸ ಸಂಗ್ರಹವಾಗುವ ಭುವನಗಿರಿ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಿಕೆಯ ದಿನಗಳು ಹತ್ತಿರ ಬರುತ್ತಿದೆ. ಇಲ್ಲಿ ಸಂಗ್ರಹ ಆಗಿರುವ ಪಾರಂಪರಿಕ ಕಸವನ್ನು ವಿಲೇವಾರಿ ಮಾಡುವುದಕ್ಕೆ ಸಂಬAಧಿಸಿದAತೆ ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿದ್ದು, ಸದ್ಯದಲ್ಲೇ ವೈಜ್ಞಾನಿಕವಾಗಿ ವಿಲೇವಾರಿ ಕಾಣಲಿದೆ. ಇದೀಗ ಯಂತ್ರಗಳನ್ನು ಅಳವಡಿಸುವ ಕಾಮಗಾರಿ ನಡೆದಿದ್ದು, ಕೆಲವೇ ದಿನಗಳಲ್ಲಿ ಘಟಕ ಕಾರ್ಯಾಚರಣೆ ಆರಂಭಿಸುವ ಮೂಲಕ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಕ್ತಿ ಕಾಣುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಜಿಲ್ಲೆಯಲ್ಲೇ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಹೆಗ್ಗಳಿಕೆಯ ಕುಶಾಲನಗರದಲ್ಲಿ ಪ್ರತಿದಿನ ಸಂಗ್ರಹವಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸ್ಥಳೀಯವಾಗಿ ಸೂಕ್ತ ಸ್ಥಳ ಇಲ್ಲದ ಕಾರಣ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಭುವನಗಿರಿಯಲ್ಲಿ ಜಾಗ ಗುರುತು ಮಾಡಿ ಅಲ್ಲಿಗೆ ಕಸವನ್ನೆಲ್ಲಾ ತೆಗೆದುಕೊಂಡು ಹೋಗಿ ಸುರಿಯಲಾಗುತ್ತಿದೆ.
ಇದರಿಂದಾಗಿ ಭುವನಗಿರಿ ಗ್ರಾಮಸ್ಥರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಆರೋಗ್ಯದ ಮೇಲೆಯೂ ದುಷ್ಪರಿಣಾಮ ಕಂಡು ಬರುತ್ತಿದ್ದು, ನಾಯಿ, ಕಾಗೆ, ಹದ್ದು, ನೊಣ ಹಾಗೂ ಸೊಳ್ಳೆಗಳ ಹಾವಳಿಯಿಂದ ಬದುಕುವುದೇ ಕಷ್ಟ ಎನ್ನುವ ವಾತಾವರಣ ಇಲ್ಲ ನಿರ್ಮಾಣ ಆಗಿದೆ ಎನ್ನುವುದು ಸ್ಥಳೀಯರ ಅಳಲು. ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡುವಂತೆ ಗ್ರಾಮಸ್ಥರು ಬಹಳ ಹಿಂದಿನಿAದಲೂ ಒತ್ತಾಯಿಸಿಕೊಂಡೇ ಬಂದಿದ್ದರು. ಇಲ್ಲಿ ಕಸ ಹಾಕವುದನ್ನು ತಡೆದು ಪ್ರತಿಭಟನೆಯನ್ನೂ ಮಾಡಿದ್ದರು.
ಇದೀಗ ಕುಶಾಲನಗರ ಪುರಸಭೆ ಭುವನಗಿರಿ ಗ್ರಾಮಸ್ಥರ ಸಮಸ್ಯೆಯ ಪರಿಹಾರಕ್ಕೆ ಮುಂದಾಗಿದೆ. ಇಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಂಡಿದೆ. ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ 3.5 ಕೋಟಿ ಮೊತ್ತದ ಯೋಜನೆಯೊಂದು ಕಾರ್ಯರೂಪಕ್ಕೆ ಬರುತ್ತಿದೆ. ಈಗಾಲೇ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಕಸ ವಿಲೇವಾರಿಗೆ ಸಂಬAಧಿಸಿದ ಯಂತ್ರೋಪಕರಣಗಳ ಅಳವಡಿಕೆ ಕಾರ್ಯ ಭರದಿಂದ ನಡೆದಿದೆ. ಈ ಕೇಂದ್ರದಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯಗಳನ್ನು ಈ ಯಂತ್ರಗಳ ಮೂಲಕ ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ. ಯಾವುದೇ ದುರ್ವಾಸನೆ ಬಾರದಂತೆ ಅತ್ಯಂತ ವೈಜ್ಞಾನಿಕವಾಗಿ ಈ ಯಂತ್ರಗಳ ಮೂಲಕ ಕಸ ವಿಲೇವಾರಿ ಕಾರ್ಯ ನಡೆಯಲಿದೆ.
ಪಾರಂಪರಿಕ ಕಸದ ವೈಜ್ಞಾನಿಕ ವಿಲೇವಾರಿ ಕಾರ್ಯಕ್ಕೆ ಸಂಬAಧಿಸಿದAತೆ ಅತ್ಯಾಧುನಿಕ ಯಂತ್ರಗಳನ್ನು ರಾಜ್ಯ ಮತ್ತು ಹೊರರಾಜ್ಯದಿಂದ ತರಿಸಿಕೊಳ್ಳಲಾಗಿದೆ.
75 ಲಕ್ಷ ರೂ. ವೆಚ್ಚದಲ್ಲಿ 4 ನೂತನ ಕಸ ವಿಲೇವಾರಿ ಯಂತ್ರಗಳು, 33 ಲಕ್ಷ ರೂ. ವೆಚ್ಚದಲ್ಲಿ ಅದಕ್ಕೆ ಸಂಬAಧಿಸಿದ ಕಸ ಜಾರಣಿ, ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಯಂತ್ರ, ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಸುವ ಯಂತ್ರ ಸೇರಿದಂತೆ ವಿವಿಧ ರೀತಿಯ ಯಂತ್ರಗಳನ್ನು ಭುವನಗಿರಿ ಕಸವಿಲೇವಾರಿ ಕೇಂದ್ರದಲ್ಲಿ ಅಳವಡಿಸಲಾಗುತ್ತಿದೆ.
ಇದರ ಜತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಈಗಾಗಲೇ ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಕಸ ವಿಲೇವಾರಿ ಘಟಕದಲ್ಲಿರುವ ಹಳೆ ಕಸವನ್ನು ತೆಗೆದು ಬೇರೆಡೆಗೆ ಸ್ಥಳಾಂತರಿಸುವ, ಮತ್ತು ಅದರಲ್ಲಿರುವ ಹಸಿ, ಮತ್ತು ಒಣ ಕಸವನ್ನು ಬೇರ್ಪಡಿಸುವುದು ಹಾಗೂ ಘಟಕದ ತಡೆಗೋಡೆಯನ್ನು ಎತ್ತರಿಸುವ, ಉತ್ತಮವಾದ ರಸ್ತೆಯ ವ್ಯವಸ್ಥೆ, ವಿವಿಧ ಕಟ್ಟಡಗಳ ನಿರ್ಮಾಣ ಅದರ ಅಭಿವೃದ್ಧಿಗೆ 12 ಕೋಟಿ ರೂ. ವೆಚ್ಚಮಾಡಲಾಗುತ್ತಿದ್ದು, ಇದರಲ್ಲಿ ಕುಶಾಲನಗರ ಪುರಸಭೆಯ ಕಸ ವಿಲೇವಾರಿ ಘಟಕವಾದ ಭುವನಗಿರಿ ಕಸ ವಿಲೇವಾರಿ ಘಟಕದ ಪಾರಂಪರಿಕ ಕಸ ವಿಲೇವಾರಿ ಮಾಡುವ ಕಾಮಗಾರಿಯೂ ಸೇರಿದೆ.
ಭುವನಗಿರಿಯಲ್ಲಿ ಪಾರಂಪರಿಕ ಕಸ ವಿಲೇವಾರಿ ಮಾಡುವ ಟೆಂಡರ್ ಪಡೆದಿರುವ ಗುತ್ತಿಗೆದಾರರು ಹಳೆಯ ಕಸವನ್ನು ಸಂಪೂರ್ಣವಾಗಿ ಘಟಕದಿಂದ ತೆಗೆಯಲಿದ್ದಾರೆ. ಅದರಲ್ಲಿರುವ ಪ್ಲಾಸ್ಟಿಕ್ ಸೇರಿದಂತೆ ವಿವಿಧ ಒಣ ಕಸವನ್ನು ಬೇರೆ ಬೇರೆ ಹಂತಗಳಲ್ಲಿ ಆಯ್ಕೆ ಮಾಡಿ ಸಿಮೆಂಟ್ ಕಾರ್ಖಾನೆ ಮತ್ತಿತರ ಮರುಬಳಕೆ ಘಟಕಗಳಿಗೆ ಕಳುಹಿಸುವ ವ್ಯವಸ್ಥೆಯನ್ನೂ ಇಲ್ಲಿ ಮಾಡಲಾಗುತ್ತಿದೆ. ಈ ಮೂಲಕ ಭುವನಗಿರಿ ಗ್ರಾಮಸ್ಥರ ಬಹುದಿನದ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಂತಾಗಿದ್ದು, ಇನ್ನಾದರೂ ತ್ಯಾಜ್ಯದಿಂದ ಆಗುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಭುವನಗಿರಿ ಕಸ ವಿಲೇವಾರಿ ಘಟಕದಲ್ಲಿ ಈಗಾಗಲೇ ಟೆಂಡರ್ ಪಡೆದ ಗುತ್ತಿಗೆದಾರ ನೂತನ ಯಂತ್ರಗಳ ಅಳವಡಿಕೆಗೆ ಸಂಬAಧಿಸಿದAತೆ ಬೃಹತ್ ಯಂತ್ರಗಳನ್ನು ರಾಜ್ಯ ಮತ್ತು ಹೊರ ರಾಜ್ಯಗಳಿಂದ ತಂದು ಅಳವಡಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದಿಂದಾಗಿ ಈ ಸಾಲಿನಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿ ಈ ಘಟಕ ನಿರ್ಮಿಸಲಾಗುತ್ತಿದೆ. ಪಾರಂಪರಿಕ ಕಸ ವಿಲೇವಾರಿ ಮಾಡುವ ಟೆಂಡರ್ ಪಡೆದಿರುವ ಗುತ್ತಿಗೆದಾರ ಹಳೆಯ ಕಸವನ್ನು ಸಂಪೂರ್ಣವಾಗಿ ಘಟಕದಿಂದ ತೆಗೆಯಲಿದ್ದಾರೆ.
ಟಿ.ಎಸ್. ಗಿರೀಶ್, ಮುಖ್ಯಾಧಿಕಾರಿ, ಪುರಸಭೆ, ಕುಶಾಲನಗರ