

ಹುಬ್ಬಳ್ಳಿ: ಎಆರ್ ಇವೆಂಟ್ಸ್ ವತಿಯಿಂದ ಬಾಲಿವುಡ್ ಗರ್ಬಾ ಹಾಗೂ ದಾಂಡಿಯಾ ನೈಟ್ ವಿಶೇಷ ಕಾರ್ಯಕ್ರಮವನ್ನು ಸೆ. 24ರಂದು ಸಂಜೆ 6ಕ್ಕೆ ನಗರದ ಲಕ್ಷ್ಮೀ ಮಾಲ್ ನಲ್ಲಿ ಏರ್ಪಡಿಸಲಾಗಿದೆ.
ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಆಯೋಜಿಸಿರುವ ದಾಂಡಿಯಾ ಕಾರ್ಯಕ್ರಮದಲ್ಲಿ ಬಾಲಿವುಡ್ ಡಿಜೆ ಅಕ್ಷ ಹಾಗೂ ಆರಿಯಾ ಪಾಲ್ಗೊಳ್ಳುವರು.
ಲೈವ್ ಡಿಜೆ ಇರಲಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಹುಬ್ಬಳ್ಳಿ ಕೋಯಿನ್ ರಸ್ತೆಯ ಲಕ್ಷ್ಮೀ ಮಾಲ್ ಎರಡನೇ ಮಹಡಿಯಲ್ಲಿರುವ ಔರಾ ಹಾಗೂ ಅಮೃತ ಬಾಂಕ್ವೆಟ್ಸ್ ಸಂಪರ್ಕಿಸಬಹುದು.