ಅಶುದ್ಧ ನೀರು ಪೂರೈಕೆಗೆ ಗರಂ, ಕಲುಷಿತ ನೀರು ಸರಬರಾಜು ಆರೋಪ

19ank nws and photos 02(1)
Published on

ಆನೇಕಲ್: ತಾಲೂಕಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರೇನಹಳ್ಳಿಯಲ್ಲಿ ಗುರುವಾರ ಕುಡಿವ ನೀರಿನಲ್ಲಿ ಇಲಿ ಚರ್ಮ, ಜಿರಳೆ ಹಾಗೂ ಕಂಬಳಿ ಹುಳಗಳು ಕಂಡುಬಂದಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಗೌರೇನಹಳ್ಳಿಗೆ ಓವರ್ ಹೆಡ್ ಟ್ಯಾಂಕ್ ಮೂಲಕ ಗ್ರಾಮದ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಕಳೆದೊಂದು ವಾರದಿಂದ ಗಬ್ಬುವಾಸನೆಯುಕ್ತ ನೀರು ಪೂರೈಕೆಯಾಗುತ್ತಿದ್ದು, ಗುರುವಾರ ಕಂಡುಬಂದ ಇಲಿ, ಚಿರಳೆಗಳು ಗ್ರಾಮಸ್ಥರನ್ನು ಕಂಗಾಲು ಮಾಡಿದೆ.

ಕರೊನಾ, ಹಕ್ಕಿಜ್ವರ, ಕಾಲರ ಮತ್ತಿತರ ರೋಗ ಭೀತಿಯಲ್ಲಿರುವ ಸಾರ್ವಜನಿಕರಿಗೆ ಪಂಚಾಯಿತಿ ಪೂರೈಸುತ್ತಿರುವ ಕುಡಿವ ನೀರು ಕಲುಷಿತಗೊಂಡಿರುವುದು ಮತ್ತಷ್ಟು ಭೀತಿಗೆ ಎಡೆಮಾಡಿಕೊಟ್ಟಿದೆ. ಕುಡಿವ ನೀರಿನಲ್ಲಿ ಸತ್ತಪ್ರಾಣಿಗಳ ಅವಶೇಷಗಳು ತೇಲಿಬರುತ್ತಿವೆ ಎಂದು ಗ್ರಾಮದ ವಿಜಯಲಕ್ಷ್ಮೀ ಎಂಬುವರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಕುಡಿವ ನೀರಿನ ಶುದ್ಧತೆ ಬಗ್ಗೆ ಯಾರೂ ಗಮನ ನೀಡುತ್ತಿಲ್ಲ ಎಂದು ಗೌರೇನಹಳ್ಳಿ ನಿವಾಸಿ ಮುನಿಯಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net