

ಅಂಕೋಲಾ: ಡಾ.ದಿನಕರ ದೇಸಾಯಿ ಅವರ ಆಶೋತ್ತರಗಳಿಗೆ ಬದ್ಧತೆ ನೀಡುವ ಸಲುವಾಗಿ ದಿನಕರ ವೇದಿಕೆ ಹುಟ್ಟು ಹಾಕಿದ್ದೇವೆ. ದೇಸಾಯಿ ಅವರು ಕಾರ್ವಿುಕರ ಹಿತಾಸಕ್ತಿಗಳಿಗಾಗಿ ಕಟಿಬದ್ಧರಾಗಿರುವ ಹಿನ್ನೆಲೆಯಲ್ಲಿ ಎಲೆಮರೆ ಕಾಯಿಯಂತೆ ಕಾಯಕ ಮಾಡುವ ಕಾರ್ವಿುಕರನ್ನು ಗುರುತಿಸಿ ವೇದಿಕೆ ಅವರನ್ನು ಸನ್ಮಾನಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ರವೀಂದ್ರ ಕೇಣಿ ಹೇಳಿದರು.
ತಾಲೂಕಿನ ಬಾಳೆಗುಳಿ ಗ್ರಾಮದಲ್ಲಿ ಸೋಮವಾರ ದಿನಕರ ವೇದಿಕೆ ಆಯೋಜಿಸಿದ ಕಾರ್ವಿುಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾದೇವ ಗ್ಯಾರೇಜ್ನಲ್ಲಿ ಕಾರ್ವಿುಕರಾಗಿ ಸೇವೆ ಸಲ್ಲಿಸುತ್ತಿದ್ದ ಮಹಾದೇವ ನಾಯ್ಕ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.
ದಿನಕರ ವೇದಿಕೆ ಸದಸ್ಯ ಮಹಾಂತೇಶ ರೇವಡಿ ಕಾರ್ವಿುಕ ದಿನಾಚರಣೆ ಮಹತ್ವ ಮತ್ತು ಪ್ರಸ್ತುತ ಸಮಯದಲ್ಲಿ ಕಾರ್ವಿುಕರ ಸ್ಥಿತಿಗತಿಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯದರ್ಶಿ ಸಂದೇಶ ಉಳ್ಳಿಕಾಶಿ ಸನ್ಮಾ ನ ಪತ್ರ ವಾಚಿಸಿದರು. ಕೋಶಾಧ್ಯಕ್ಷ ಸಂತೋಷ ನಾಯಕ ಸ್ವಾಗತಿಸಿದರು. ಸಹಕಾರ್ಯದರ್ಶಿ ವಸಂತ ನಾಯ್ಕ ನಿರ್ವಹಿಸಿದರು. ಎಂಎಂ. ರ್ಕಕರ, ದುರ್ಗಾನಂದ ದೇಸಾಯಿ, ರಫೀಕ ಶೇಖ್ ಕಾರ್ಯಕ್ರಮ ಸಹಕರಿಸಿದರು.