ಗರಡಿ ಕ್ಷೇತ್ರದ ಪರಿವಾರ ದೈವ-ದೇವರುಗಳಿಗೆ ಕಲಶಾಭಿಷೇಕ

Mng-mar5-garodi1
Published on

ಮಂಗಳೂರು: ನಗರದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಗರಡಿ ಸಂಭ್ರಮ -150ರ ನಮ್ಮೂರ ಸಂಭ್ರಮ ಅಂಗವಾಗಿ ಭಾನುವಾರ ಬೆಳಗ್ಗೆ ಗರಡಿ ಕ್ಷೇತ್ರದ ಪರಿವಾರ ದೈವ-ದೇವರುಗಳಿಗೆ ಕಲಶಾಭಿಷೇಕ, ಮಹಾಪೂಜೆ ನಡೆಯಿತು.
ವೇದಮೂರ್ತಿ ಕೆ.ವಾಸುದೇವ ಶಾಂತಿಯವರ ಉಪಸ್ಥಿತಿಯಲ್ಲಿ ಬಿ.ಗಂಗಾಧರ ಶಾಂತಿ ನೇತೃತ್ವದಲ್ಲಿ ನಾರಾಯಣಗುರು ವೈದಿಕ ಸಮಿತಿ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ಬೆಳಗ್ಗೆ 5.30ಕ್ಕೆ ಆರಂಭಗೊಂಡ ಕಲಶಾಭಿಷೇಕ ಮಧ್ಯಾಹ್ನ 11ರವರೆಗೆ ನಡೆಯಿತು. ಪ್ರಾರಂಭದಲ್ಲಿ ಮಹಾಗಣಪತಿ ದೇವರಿಗೆ ಕಲಶಾಭಿಷೇಕ ಆರಂಭವಾಗಿ ಬಳಿಕ ಬಾಲಪರಮೇಶ್ವರಿ, ಸುಬ್ರಹ್ಮಣ್ಯ, ಆನಂದ ಭೈರವಿ, ನಾಗದೇವರಿಗೆ, ನವಗ್ರಹ, ಮಯಾಂದಾಲ್, ದೇಯಿಬೈದೆತಿ, ವಿಷ್ಣುಮೂರ್ತಿ ಕೊಡಮಣಿಂತ್ತಾಯ ದೈವಕ್ಕೆ, ನಾರಾಯಣ ಗುರುಗಳಿಗೆ ಕಲಶಾಭಿಷೇಕ ನಡೆಯಿತು. ಈ ಸಂದರ್ಭ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿ ಪುಣ್ಯಕ್ಷಣವನ್ನು ಕಣ್ತುಂಬಿಕೊಂಡರು. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 4ರಿಂದ ಸರ್ವತೋಭದ್ರ ಮಂಡಲ ಪೂಜೆ, ಬ್ರಹ್ಮಕಾವೇರಿ ತೀರ್ಥದಲ್ಲಿ ಗಂಗಾ ಪೂಜೆ, ತತ್ಕಲಾ ಹೋಮ, ಕುಂಭೇಶ ಕರ್ಕರಿ ಪೂಜೆ, ಬ್ರಹ್ಮಕಲಶಾಧಿವಾಸ ಪೂಜೆ, ಅಂಕುರಾರೋಹಣ, ಕುಂಭೇಶ ಪರಿಭ್ರಮಣ ನಡೆಯಿತು. ಸಂಜೆ 4.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ, ಪುಷ್ಪರಾಜ್ ಜೈನ್, ರೋಹಿತ್ ಸನಿಲ್ ಕುವೈಟ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ., ಗರಡಿ ಸಂಭ್ರಮದ ಅಧ್ಯಕ್ಷ ಮೋಹನ್ ಉಜ್ಜೋಡಿ, ಮ್ಯಾನೇಜರ್ ಜೆ. ಕಿಶೋರ್, ಗರಡಿ ಕ್ಷೇತ್ರದ ಮೊಕ್ತೇಸರ ಬಿ.ವಿಠಲ, ಎ.ವಾಮನ, ಬಿ.ದಾಮೋದರ ನಿಸರ್ಗ, ದಿವರಾಜ್, ಜಗದೀಪ್ ಡಿ.ಸುವರ್ಣ, ದಿನೇಶ್ ಅಂಚನ್, ಜೆ.ವಿಜಯ, ಕಾರ್ಪೊರೇಟರ್‌ಗಳಾದ ಪ್ರವೀಣ್‌ಚಂದ್ರ ಆಳ್ವ, ಸಂದೀಪ್ ಗರಡಿ, ಭಾಸ್ಕರ್ ಕೆ., ಶಶಿಧರ್ ಹೆಗ್ಡೆ, ಆರ್ಥಿಕ ಸಮಿತಿ ಮುಖ್ಯಸ್ಥ ಶರಣ್ ಪಂಪ್‌ವೆಲ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net