ಕೆಐಒಸಿಎಲ್​ಗೆ ಗಂಟಿ ವೆಂಕಟ್​ ಕಿರಣ್​ ನೂತನ ಅಧ್ಯಕ್ಷ

kiran
Published on

ಬೆಂಗಳೂರು: ಕುದುರೆಮುಖ ಐರನ್​ ಓರ್​ ಕಂಪನಿ ಲಿ.ಗೆ (ಕೆಐಒಸಿಎಲ್​) ನೂತನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಗಂಟಿ ವೆಂಕಟ್​ ಕಿರಣ್​ ಅಧಿಕಾರ ವಹಿಸಿಕೊಂಡಿದ್ದಾರೆ.

ಕ್ಷೇತ್ರದಲ್ಲಿ 34 ವರ್ಷಗಳ ಅನುಭವ ಹೊಂದಿರುವ ಇವರು, ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಸಂಪಾದಿಸಿದ್ದಾರೆ. ಭೂಪಾಲ್​ನ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​​​ ಟೆಕ್ನಾಲಜಿಯಿಂದ ಮೆಕಾನಿಕಲ್​ ಇಂಜಿನಿಯರಿಂಗ್​ನಲ್ಲಿ ಬಿ.ಟೆಕ್​. ಮುಗಿಸಿದ ಬಳಿಕ ಎಂ.ಟೆಕ್​. ಕೋರ್ಸ್​ ಪೂರೈಸಿದ್ದಾರೆ. ಕೆಐಒಸಿಎಲ್​ಗೆ ಸೇರುವ ಮುನ್ನ ಉಕ್ಕು ಮತ್ತು ಗಣಿಗಾರಿಕೆ ವಲಯಗಳಲ್ಲಿನ ಪ್ರಮುಖ ಸಂಸ್ಥೆಗಳಲ್ಲಿ ಹಲವು ಹುದ್ದೆ ಅಲಂಕರಿಸಿದ್ದರು. ಒಡಿಶಾದ ಬಿಆರ್​ಪಿಎಲ್​ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದ ವೇಳೆ ಪ್ರಮುಖ ಯೋಜನೆ ಪೂರ್ಣಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಎಸ್ಸಾರ್​ ಸ್ಟೀಲ್​ ಲಿ.ನಲ್ಲಿ ಉಪಾಧ್ಯಕ್ಷರಾಗಿ ಹಾಗೂ ಆದಿತ್ಯ ಬಿರ್ಲಾ ಗ್ರೂಪ್​ನಲ್ಲಿ ಪ್ರಧಾನ ವ್ಯವಸ್ಥಾಪಕ ಹುದ್ದೆಯಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net