

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ವಿವಿಧ ರೈಲು ನಿಲ್ದಾಣಗಳಲ್ಲಿ ಬುಧವಾರ ದಾಳಿ ನಡೆಸಿದ ಆರ್ಪಿಎಫ್ ಸಿಬ್ಬಂದಿ, 38,56,600 ರೂ. ಮೌಲ್ಯದ 46.958 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಶಾಲಿಮಾರ-ವಾಸ್ಕೊ ರೈಲಿನಲ್ಲಿ ಸಾಗಿಸುತ್ತಿದ್ದ 4,21,100 ರೂ. ಮೌಲ್ಯದ 4.211 ಕೆಜಿ ಗಾಂಜಾವನ್ನು ಲೋಂಡಾ ನಿಲ್ದಾಣದಲ್ಲಿ, ಬೆಂಗಳೂರಿನ ಎಸ್ಎಂವಿಟಿ ರೈಲು ನಿಲ್ದಾಣದ 6ನೇ ಪ್ಲಾಟ್ಫಾಮರ್್ನಿಂದ 16.01 ಲಕ್ಷ ರೂ. ಮೌಲ್ಯದ 22.942 ಕೆಜಿ ಗಾಂಜಾವನ್ನು, ಬೆಂಗಳೂರು ಗ್ರಾಮೀಣ ಜಿಲ್ಲೆಯ ದೇವಂಗೋತಿ ನಿಲ್ದಾಣದಲ್ಲಿ 7.04 ಲಕ್ಷ ರೂ. ಮೌಲ್ಯದ 8.5 ಕೆಜಿ ಗಾಂಜಾ, ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಶಾಲಿಮಾರ-ವಾಸ್ಕೋ ಎಕ್ಸ್ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ 11,30,500 ರೂ. ಮೌಲ್ಯದ 11.305 ಕೆಜಿ ಗಾಂಜಾವನ್ನು ಆರ್ಪಿಎಫ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರೈಲಿನಲ್ಲಾಗಲಿ ಅಥವಾ ರೈಲು ನಿಲ್ದಾಣದಲ್ಲಾಗಲಿ ಗಾಂಜಾವನ್ನು ಸಾಗಿಸುತ್ತಿದ್ದವರು ಆರ್ಪಿಎಫ್ ಸಿಬ್ಬಂದಿಗೆ ಸಿಕ್ಕಿಲ್ಲ. ಈ ಕುರಿತು ಆರ್ಪಿಎಫ್ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.