ಆಂಧ್ರದಿಂದ ಕೋಟಿ ರೂ.ಮೌಲ್ಯದ ಗಾಂಜಾ ಸಾಗಾಟ, ನಾಲ್ವರ ಬಂಧನ

mmg-may26-ganjha4
Published on

ಆಂಧ್ರಪ್ರದೇಶದ ತೂಣಿಯಿಂದ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದ್ದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಸಹಿತ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಮೀನು ಸಾಗಾಟದ ಲಾರಿಯಲ್ಲಿ ಗಾಂಜಾದ ಪ್ಯಾಕೆಟ್‌ಗಳನ್ನು ಅಡಗಿಸಿ ಸಾಗಾಟ ಮಾಡುತ್ತಿದ್ದರು. ಆಂದ್ರಪ್ರದೇಶದಿಂದ ಹಾಸನ-ಮಂಗಳೂರು ಮಾರ್ಗವಾಗಿ ಈ ಸಾಗಾಟ ಮಾಡುವ ವೇಳೆ ಬುಧವಾರ ಬೆಳಗ್ಗಿನ ಜಾವ ಪೊಲೀಸರು ತಲಪಾಡಿ ಬಳಿ ಲಾರಿ ಅಡ್ಡಗಟ್ಟಿದ್ದಾರೆ.
ನಾಲ್ವರು ಆರೋಪಿಗಳಾದ ಕಾಸರಗೋಡು ನಿವಾಸಿ ಮೊಹಮ್ಮದ್ ಫಾರುಕ್, ಕೊಡಗು ಕುಶಾಲನಗರದ ಸಯ್ಯದ್ ಮೊಹಮ್ಮದ್, ಮುಡಿಪುವಿನ ಮೊಹಮ್ಮದ್ ಅನ್ಸಾರ್, ಮಂಜೇಶ್ವರದ ಮೊಹಿದ್ದೀನ್ ನವಾಜ್ ಬಂಧಿತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net