12 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ

crime
Published on

ಹುಬ್ಬಳ್ಳಿ: ಗಬ್ಬೂರ ಬೈಪಾಸ್ ಹತ್ತಿರ ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರಿಂದ 12 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ಹಾನಗಲ್ ಮೂಲದವರಾದ ಶಾಹೀದ್, ರೆಹಮಾನ್, ನಿಸ್ಸಾರ್ ಬಂಧಿತರು. ಕಾರ್‌ನಲ್ಲಿ ಆಗಮಿಸಿದ್ದ ಮೂವರು, ಆಟೋದಲ್ಲಿದ್ದ ಗಾಂಜಾ ತೆಗೆದುಕೊಂಡು ಕಾರ್‌ನಲ್ಲಿಟ್ಟುಕೊಳ್ಳುತ್ತಿದ್ದರು. ಸಿಸಿಬಿ ಪಿಎಸ್‌ಐ ಮಂಜುನಾಥ ಟಿ.ಎಂ. ಕೊಟ್ಟ ದೂರಿನ ಮೇರೆಗೆ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net