1.480 ಕೆ.ಜಿ ಗಾಂಜಾ ಸಾಗಾಟ ಪತ್ತೆ, ನೇಪಾಳ ಪ್ರಜೆ ಸಹಿತ ಇಬ್ಬರ ಬಂಧನ

ganja
Published on

ಮಂಗಳೂರು: ಬಿ.ಸಿ.ರೋಡ್-ಮಾಣಿ ನಡುವೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 1.480 ಕಿ.ಗ್ರಾಂ. ಗಾಂಜಾವನ್ನು ಮೆಲ್ಕಾರ್‌ನಲ್ಲಿ ವಶಪಡಿಸಿಕೊಂಡಿರುವ ಜಿಲ್ಲಾ ಅಪರಾಧ ಪತ್ತೆ ದಳ (ಡಿಸಿಐಬಿ) ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂದರ್ ಅನ್ಸಾರಿ ಅಡ್ಡ ರಸ್ತೆ ಹಜಾರ್ ಹೌಸ್‌ನ ಟಿ.ಪಿ ಫಾರೂಕ್(50), ಮೂಲತಃ ನೇಪಾಳದವನಾಗಿದ್ದು, ಪಿವಿಎಸ್ ಬಳಿ ಪಿಜಿಯಲ್ಲಿ ವಾಸವಾಗಿದ್ದ ಸಾಗರ್ ಸಿಂಗ್(22) ಬಂಧಿತರು. ಮಾರುತಿ ಬ್ರೀಝಾ ಕಾರು ಸಹಿತ ಒಟ್ಟು 10,32,900 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಇನ್‌ಸ್ಪೆಕ್ಟರ್ ಚೆಲುವರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಿರಾಕಿಗಳಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ವಶಪಡಿಸಿಕೊಂಡ ಸೊತ್ತು ಹಾಗೂ ಆರೋಪಿಗಳನ್ನು ಬಂಟ್ವಾಳ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಲಕ್ಷ್ಮಣ ಕೆ.ಜಿ, ಉದಯ ರೈ, ಪ್ರವೀಣ್ ಎಂ., ತಾರಾನಾಥ್, ಪ್ರವೀಣ್ ರೈ, ಶೋನ್‌ಶಾ, ಸುರೇಶ್ ಭಾಗವಹಿಸಿದ್ದರು. ತಾಂತ್ರಿಕ ವಿಭಾಗದ ಸಂಪತ್ ಮತ್ತು ದಿವಾಕರ್ ಸಹಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net