ಗಾಂಜಾ ಮಾರುತ್ತಿದ್ದ ಐವರ ಬಂಧನ, 3.26 ಕೆಜಿ ಮಾದಕ ವಸ್ತು ವಶ

Screenshot_20240629-085648_1-1.jpg
Published on

ಹುಬ್ಬಳ್ಳಿ: ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಐವರನ್ನು ಗಾಂಜಾ ಮಾರಾಟದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಮುಬಾರಕ, ತೋಸಿಫ್, ಶೇಖರ್ ಸೇರಿ ಐವರು ಬಂಧಿತರೆಂದು ಹೇಳಲಾಗಿದೆ. ಬಂಧಿತರಿಂದ ಸುಮಾರು 3.26 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ನಗರದ ಮಂಟೂರ ರಸ್ತೆ ರೈಲ್ವೆ ಗೇಟ್ ಹತ್ತಿರದಲ್ಲಿ ಅನುಮಾನಾಸ್ಪದವಾಗಿ ಇವರು ತಿರುಗಾಡುತ್ತಿದ್ದರು. ಕರ್ತವ್ಯದಲ್ಲಿದ್ದ ಬೆಂಡಿಗೇರಿ ಠಾಣೆ ಪೊಲೀಸರು ಬೆನ್ನತ್ತಿ ಇವರನ್ನು ಬಲೆಗೆ ಕೆಡವಿದ್ದಾರೆ. ಇವರೆಲ್ಲ ಗಾಂಜಾ ಮಾರಾಟ ಮಾಡುತ್ತಿದ್ದ ಕಿಂಗ್ ಪಿನ್ ಗಳೆಂದು ಹೇಳಲಾಗಿದೆ.

ಬೆಂಡಿಗೇರಿ ಠಾಣೆ ಇನ್ಸಪೆಕ್ಟರ್ ಅಲಿಶೇಖ ಹಾಗೂ ಪಿಎಸ್ಐ ಶರಣ ದೇಸಾಯಿ ನೇತೃತ್ವದಲ್ಲಿ ಸಿಬ್ಬಂದಿ ಹನಮಂತ, ಅಂಬಿಗೇರ, ಸೋಮು, ರಾಮು, ಇತರರು ದಾಳಿ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net