ಗಾಂಜಾ ಮಾರುತ್ತಿದ್ದವನ ಬಂಧನ

5 srinivaspur 2
ಶ್ರೀನಿವಾಸಪುರದ ವಳಗೆರನಹಳ್ಳಿ ಬಳಿ ಗಾಂಜಾ ವಾರಾಟಗಾರನನ್ನು ಪೊಲೀಸ್ ನಿರೀಕ್ಷಕ ಜಿ.ಸಿ.ನಾರಾಯಣಸ್ವಾಮಿ ಮತ್ತು ತಂಡ ಬಂಧಿಸಿ ಗಾಂಜಾ ವಶಪಡಿಸಿಕೊಂಡರು.
Published on

ಶ್ರೀನಿವಾಸಪುರ: ಪಟ್ಟಣ ಠಾಣಾ ವ್ಯಾಪ್ತಿಯ ವಳಗೆರನಹಳ್ಳಿಗೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಗಾಂಜಾ ಮಾರಾಟಕ್ಕೆ ಬಂದಿದ್ದ ನೂರ್‌ಪಾಷಾ ಬಿನ್ ಲೇಟ್ ಅಮೀರ್‌ಖಾನ್ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 21 ಕೆ.ಜಿ ಗಾಂಜಾ ಮತ್ತು ದ್ವಿ-ಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಖಚಿತ ವಾಹಿತಿ ಮೇರೆಗೆ ಬಂದಿದ್ದ ಕೋಲಾರ ನಗರದ ಟವರ್ ವಾಸಿಯಾದ ನೂರ್‌ಪಾಷಾ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಎಸ್ಪಿ ಡಿ.ದೇವರಾಜ್, ಪೊಲೀಸ್ ಅಧೀಕ್ಷಕ ಸಚಿನ್ ಘೋರ್ಪಡೆ ವಾರ್ಗದರ್ಶನದಲ್ಲಿ ಡಿಎಸ್‌ಪಿ ಪಿ.ಮುರಳೀಧರ್ ಮುಂದಾಳತ್ವದಲ್ಲಿ ದಾಳಿ ನಡೆಸಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಪರಾಧ ವಿಭಾಗದ ಎಎಸ್‌ಐ ಅಮೀದ್‌ಖಾನ್ ಹಾಗೂ ಸಿಬ್ಬಂದಿ ರಾಮಚಂದ್ರ, ಮಂಜುನಾಥ್, ಸುರೇಶ್, ವೆಂಕಟಾಚಲಪತಿ, ಷಫೀವುಲ್ಲಾ, ಸಂದೀಪ್, ರಿಜ್ವಾನ್, ಸಿಬಾನ್

ಎನ್‌ಪಿಎಸ್ ಕಾಯ್ದೆ ಅಡಿಯಲ್ಲಿ ಪೊಲೀಸ್ ನಿರೀಕ್ಷಕ ಜಿ.ಸಿ.ನಾರಾಯಣಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net