ದೇವಂಗಿ ಲೇಔಟ್‌ನಲ್ಲಿ ಗಾಂಜಾ ಮಾರುತ್ತಿದ್ದವ ಬಂಧನ

vinobnagar police station
ವಿನೋಬನಗರ ಪೊಲೀಸ್ ಠಾಣೆ.
Published on

ಶಿವಮೊಗ್ಗ: ಕೀರ್ತಿನಗರದ ದೇವಂಗಿ ಲೇಔಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಬಂಧಿಸಿರುವ ಪೊಲೀಸರು, 30 ಸಾವಿರ ರೂ. ಮೌಲ್ಯದ ಒಣ ಗಾಂಜಾ, 200 ರೂ. ನಗದು ಮತ್ತು ಮೊಬೈಲ್ ಅನ್ನು ಜಪ್ತಿ ಮಾಡಿದ್ದಾರೆ.

ಕೋಲಾರ ಜಿಲ್ಲೆ ನರಸಾಪುರ ಗ್ರಾಮದ ಮನೋಜ್ (21) ಬಂಧಿತ ಆರೋಪಿ. ಈತ ಶುಕ್ರವಾರ ವಿನೋಬನಗರ ಠಾಣಾ ವ್ಯಾಪ್ತಿಯ ದೇವಂಗಿ ಲೇಔಟ್‌ನಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಉಪ ವಿಭಾಗ-2ರ ಡಿವೈಎಸ್ಪಿ ಬಿ.ಸುರೇಶ್ ಮಾರ್ಗದರ್ಶನದಲ್ಲಿ ಪ್ರೊಬೇಷನರಿ ಐಪಿಎಸ್ ಆರ್.ಬಿಂದುಮಣಿ ನೇತೃತ್ವದ ತಂಡವು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ. ಆತನಿಂದ 1.105 ಕೆಜಿ ಒಣ ಗಾಂಜಾ, ನಗದು ಮತ್ತು ಮೊಬೈಲ್ ಜಪ್ತಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net