ಗಾಂಜಾ ವಶ, ಆರೋಪಿ ಬಂಧನ

P PURA ABAKAARI 30
Published on

ಪರಶುರಾಮಪುರ: ಕೊರ‌್ಲಕುಂಟೆ ಗ್ರಾಮದ ಎಸ್.ಪ್ರವೀಣಕುಮಾರ ಎಂಬಾತನನ್ನು ಶನಿವಾರ ಬಂಧಿಸಿದಿರುವ ಅಬಕಾರಿ ಪೊಲೀಸರು, 940 ಗ್ರಾಂ ಹಸಿ, 20 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕೊರ‌್ಲಕುಂಟೆ ಗ್ರಾಮದ ಕೂಲಿ ಕೆಲಸ ಮಾಡಿಕೊಂಡಿದ್ದ ಪ್ರವೀಣಕುಮಾರ್, ತನ್ನ ಮನೆ ಹಿಂಭಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ. ಈ ಕುರಿತು ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ, ಗಿಡ, ಮನೆಯಲ್ಲಿದ್ದ ಒಣ ಸೊಪ್ಪು ಸಹಿತ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಚಳ್ಳಕೆರೆ ವಲಯದ ಅಬಕಾರಿ ನಿರೀಕ್ಷಕ ಸಿ ನಾಗರಾಜ, ಚಿತ್ರದುರ್ಗ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕಿ ವನಿತಾ, ಅಬಕಾರಿ ಉಪ ನಿರೀಕ್ಷಕರಾದ ಸಿದ್ದೇಶ ನಾಯ್ಕ, ಡಿ.ಟಿ.ತಿಪ್ಪಯ್ಯ, ಟಿ.ರಂಗಸ್ವಾಮಿ, ಪೇದೆಗಳಾದ ಟಿ ಸೋಮಶೇಖರ, ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net