ಗಾಂಜಾ ಪತ್ತೆ: ನಾಲ್ವರ ಸೆರೆ

Ganja
Published on

ಚಿಕ್ಕಮಗಳೂರು: ನಗರದಿಂದ ತರೀಕೆರೆ ಕಡೆ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಲಿಂಗದಹಳ್ಳಿ ಪೊಲೀಸರು ಬಂಧಿಸಿ 2.5 ಲಕ್ಷ ರೂ. ಮೌಲ್ಯದ 8.5 ಕೆ.ಜಿ.ಗಾಂಜಾ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ನಗರದ ಕಲ್ದೊಡ್ಡಿಯ ಸಂಜಯ್, ದೀಪಕ್, ಭದ್ರಾವತಿ ಮೂಲದ ಎಚ್.ಎಂ.ನಿಖಿಲ್, ಕೆ.ಭರತ್ ಎಂದು ಗುರುತಿಸಲಾಗಿದೆ. ಇತರ ಆರೋಪಿಗಳಾದ ಭದ್ರಾವತಿಯ ಆನಂದ್, ಕಲ್ದೊಡ್ಡಿಯ ಗಂಗಾ ಪರಾರಿಯಾಗಿದ್ದಾರೆ.

ಉಡೇವಾ ಬಳಿ ಚಿಕ್ಕಮಗಳೂರು ಕಡೆಯಿಂದ ಬಂದ ಕಾರನ್ನು ತಡೆದು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಕಾರು ಹಾಗೂ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net