ಧಕ್ಕೆಯಲ್ಲಿ ಗಾಂಜಾ ಮಾರಾಟ ಇಬ್ಬರ ಬಂಧನ

drugs
Published on

ಮಂಗಳೂರು: ನಗರದ ಧಕ್ಕೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಕಸಬಾ ಬೆಂಗರೆ ನಿವಾಸಿಗಳಾದ ಅಬ್ದುಲ್ ರಹೀಂ (43) ಮತ್ತು ಮೊಹಮ್ಮದ್ ಅಶ್ರ್ (47) ಬಂಧಿತ ಆರೋಪಿಗಳು.


ಜು.26ರಂದು ನಗರದ ಬಂದರು ಉತ್ತರ ಧಕ್ಕೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಿ ಅಬ್ದುಲ್ ರಹೀಂ ಮತ್ತು ಮೊಹಮ್ಮದ್ ಅಶ್ರ್ ಎಂಬವರು ಆಕ್ಟಿವ್ ಹೋಂಡಾ ಸ್ಕೂಟರೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 1.67ಲಕ್ಷ ರೂ. ಮೌಲ್ಯದ ಒಟ್ಟು 3.378ಕೆ.ಜಿ. ಗಾಂಜಾ, ತೂಕಮಾಪನ, ನಗದು 4940 ರೂ. ಹಾಗೂ 50 ಸಾವಿರ ರೂ. ಮೌಲ್ಯದ ಆಕ್ಟಿವಾ ಹೋಂಡಾ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್, ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್, ಎಸಿಪಿ ಮಹೇಶ್ ಮಾರ್ಗದರ್ಶನದಲ್ಲಿ ಉತ್ತರ ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಾಯಕ ತೋರಗಲ್, ಸಿಬ್ಬಂದಿ ಎಎಸ್‌ಐ ದಾಮೋದರ, ಹೆಚ್‌ಸಿಗಳಾದ ಮದನ್, ಸತೀಶ್, ಸಂಪತ್, ಸುನಿಲ್ ಮತ್ತು ಗುರು ಬಿ.ಟಿ. ಜತೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net