

ಶಿವಮೊಗ್ಗ: ರೈಲ್ವೆ ನಿಲ್ದಾಣದ ವಾಹನ ಪಾರ್ಕಿಂಗ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು 38 ಸಾವಿರ ರೂ. ಮೌಲ್ಯದ ಒಣ ಗಾಂಜಾ, 2 ಬೈಕ್, 5 ಮೊಬೈಲ್ ಮತ್ತು 500 ರೂ. ನಗದು ಜಪ್ತಿ ಮಾಡಿದ್ದಾರೆ.
ಹೊಸಮನೆಯ ನವೀನ್ (28), ಶಿಕಾರಿಪುರದ ಪ್ರದೀಪ (25), ಶಿಕಾರಿಪುರ ಹಳಿಯೂರು ಹೊಸಕೇರಿಯ ಗಿರೀಶ (29), ಸೊರಬ ತಾಲೂಕಿನ ಇಂಡುವಳ್ಳಿ ಬಸವರಾಜಪ್ಪ (48) ಬಂಧಿತರು.
ಶನಿವಾರ ಮಧ್ಯಾಹ್ನ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.