ಮೈಸೂರಿನಲ್ಲಿ ಗಾಂಜಾ ಪೆಡ್ಲರ್ ಬಂಧನ

ganja
Published on

ಮೈಸೂರು: ಗಾಂಜಾ ಪೆಡ್ಲರ್ ಹಾಗೂ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 62,500 ರೂ. ಮೌಲ್ಯದ 2 ಕೆ.ಜಿ. 600 ಗ್ರಾಂ ಗಾಂಜಾ ಹಾಗೂ ಗಾಂಜಾ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ ಸ್ಕೂಟರ್‌ಅನ್ನು ಇತ್ತೀಚೆಗೆ ವಶಕ್ಕೆ ಪಡೆದುಕೊಂಡಿದ್ದಾರೆ.

ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಶಾರದಾವಿಲಾಸ ಕಾಲೇಜಿನ ಬಳಿ ಸಿಸಿಬಿ ಘಟಕದ ಅಧಿಕಾರಿ, ಸಿಬ್ಬಂದಿ ಗಸ್ತಿನಲ್ಲಿದ್ದಾಗ ಗಾಂಜಾವನ್ನು ಚಿಲುಮೆಯಲ್ಲಿ ತುಂಬಿಕೊಂಡು ಸೇವನೆ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ 99 ಗ್ರಾಂ ಗಾಂಜಾ ಮತ್ತು ಸ್ಕೂಟರ್ ವಶಕ್ಕೆ ಪಡೆದರು. ಈ ಇಬ್ಬರನ್ನ ವಿಚಾರಣೆಗೊಳಪಡಿಸಿದಾಗ ದೊರೆತ ಮಾಹಿತಿ ಪ್ರಕಾರ ಗಾಂಜಾ ಮಾರಾಟ ಮಾಡುತ್ತಿದ್ದ ಪೆಡ್ಲರ್‌ಅನ್ನು ಬಂಧಿಸಿ ಆತನ ಬಳಿ ಇದ್ದ 2 ಕೆಜಿ 510 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net