ಗಾಂಜಾ ಸೇವನೆ ಇಬ್ಬರ ಬಂಧನ

drugs
Published on

ಮಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಸೋಮವಾರದಂದು ಪಾಂಡೇಶ್ವರ ಮತ್ತು ಉರ್ವ ಠಾಣೆಯ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.


ಕೇರಳ ಕೊಟ್ಟಾಯಂನ ಇಮ್ಯಾನುವೆಲ್ ಮಾರ್ಕೋಸ್ ಜೋಕಬ್(22) ಮತ್ತು ತ್ರಿಶೂಲ್ ಜಿಲ್ಲೆಯ ಅನಿವಿಂದ್ ಕೃಷ್ಣ(20) ಬಂಧಿತ ಆರೋಪಿಗಳು.
ಇಮ್ಯಾನುವೆಲ್ ಮಾರ್ಕೋಸ್ ಜೋಕಬ್ ವೆಲೆನ್ಸಿಯಾ ಚರ್ಚ್ ಸ್ಮಶಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ. ಅನಿವಿಂದ್ ಕೃಷ್ಣ ಚಿಲಿಂಬಿಗುಡ್ಡೆಯ ಆದರ್ಶನಗರದ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟಿನ ಒಳಗೆ ಗಾಂಜಾ ತುಂಬಿಸಿ ಸೇದುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net