

ಮಂಗಳೂರು: ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ನಿಷೇಧಿತ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಉರ್ವ ಪೊಲೀಸರು ಮಾ.1ರಂದು ಮಧ್ಯರಾತ್ರಿ ವೇಳೆ ಬಿಜೈ ಕಾಫಿಕಾಡ್ ಮತ್ತು ಹ್ಯಾಟ್‌ಹಿಲ್ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಪೊಲೀಸ್ ವಾಹನ ನೋಡಿ ಕೈಯಲ್ಲಿದ್ದ ಸಿಗರೇಟ್ ಬಿಸಾಡಿದ ಕೇರಳದ ಮುಹಮ್ಮದ್ ಫಾಜಿಲ್ ಕೆ.(24) ಮತ್ತು ಕಾಸರಗೋಡಿನ ಸಬದ್ ಎಸ್.(25)ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರ ಬಾಯಿಯಿಂದ ಗಾಂಜಾ ಸೇವನೆ ವಾಸನೆ ಬರುತ್ತಿತ್ತು. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.