ಗಾಂಜಾ ಸಾಗಾಟ ಆರೋಪಿ ಬಂಧನ

ganja
Published on

ಕಾಸರಗೋಡು: ಗಾಂಜಾ ಸಾಗಿಸುತ್ತಿದ್ದ ಉಪ್ಪಳ ಮಣಿಮುಂಡ ನಿವಾಸಿ ಸಯ್ಯಿದ್ ಮಹಮ್ಮದ್ ಅರ್ಶಾದ್ ಎಂಬಾತನನ್ನು ಅಬಕಾರಿ ದಳ ಸಿಬ್ಬಂದಿ ಬಂಧಿಸಿದ್ದಾರೆ. ಅಬಕಾರಿ ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದ ತಂಡ ಉಪ್ಪಳದಲ್ಲಿ ಕಾರ್ಯಾಚರಣೆ ನಡೆಸಿದ್ದು, ಈತನ ವಶದಲ್ಲಿದ್ದ 530ಗ್ರಾಂ ಗಾಂಜಾ ವಶಪಡಿಸಿಕೊಂಡಿದೆ. ಈತನ ವಿರುದ್ಧ ಎನ್‌ಡಿಪಿಎಸ್ ಅನ್ವಯ ಕೇಸು ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net