ಗಾಂಜಾ ಸಾಗಾಟ, ಒಬ್ಬನ ಬಂಧನ

ganja
Published on

ಕಾಸರಗೋಡು: ನಗರಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 900ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಪುದಿಯಙೌಡು ಮಾಡಾಯಿ ನಿವಾಸಿ ಮಹಮ್ಮದ್ ಅನಸ್ ಎಂಬಾತನನ್ನು ಬಂಧಿಸಿದ್ದಾರೆ. ಕಾಸರಗೋಡಿನ ಏಜೆಂಟ್ ಒಬ್ಬನಿಗೆ ನೀಡಲು ತರುತ್ತಿದ್ದಾಗ ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಠಾರದಲ್ಲಿ ಎಸ್.ಐ.ಪಿ. ಅನೂಪ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net