ಗಾಂಜಾ ಸಾಗಿಸುತ್ತಿದ್ದಾತನ ಬಂಧನ

ganja
Published on

ಕಾಸರಗೋಡು: ಗಾಂಜಾ ಸಾಗಿಸುತ್ತಿದ್ದ ಕುಂಬಳೆ ಕೊಡ್ಯಮ್ಮೆ ಕಂಚಿಕಟ್ಟೆ ನಿವಾಸಿ ಅಬ್ದುಲ್ ರಹಮಾನ್ ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ವಶದಲ್ಲಿದ್ದ 25 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಪೊಲೀಸರ ತಂಡ ಪೂಕಟ್ಟೆ ರೇಶನ್ ಅಂಗಡಿ ಸನಿಹ ಪೆಟ್ರೋಲಿಂಗ್ ನಡೆಸುವ ಮಧ್ಯೆ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ಈತನನ್ನು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net