ವಾರದಲ್ಲಿ 72 ಗಾಂಜಾ ಪ್ರಕರಣ

Ganja
Published on

ಮಂಗಳೂರು: ನಗರ ಪೊಲೀಸ್ ಕಮೀಷನರೆಟ್ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಂದೇ ವಾರದಲ್ಲಿ 72 ಗಾಂಜಾ ಸಾಗಾಟ, ಸೇವನೆ ಪ್ರಕರಣ ಪತ್ತೆಯಾಗಿದೆ.

ನಗರ ಪೊಲೀಸರು ೆ.3ರಿಂದ 7ರವರೆಗೆ ಪೊಲೀಸರು 16 ಠಾಣಾ ವ್ಯಾಪ್ತಿಯಲ್ಲಿ ನಿರಂತರ ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭ ಆರೋಪಿಗಳಿಂದ 3.688 ಕೆ.ಜಿ ಗಾಂಜಾ, 2.15 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 10 ಪ್ರಕರಣ ಗಾಂಜಾ ಸಾಗಾಟ ಹಾಗೂ 62 ಗಾಂಜಾ, ಎಂಡಿಎಂಎ ಸೇವನೆಯದ್ದಾಗಿದೆ.

ಇವುಗಳಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತೀ ಹೆಚ್ಚು (9) ಪ್ರಕರಣ ದಾಖಲಾದರೆ, ಕಾವೂರು, ಬಜ್ಪೆ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net